ದಾವಣಗೆರೆ, ಏ. 10 – 2023-24 ನೇ ಶೈಕ್ಷಣಿಕ ಸಾಲಿನ ಪಿಯು ಫಲಿತಾಂಶದಲ್ಲಿ ನಗರದ ನೂತನ ಪಿಯು ಕಾಲೇಜಿಗೆ ವಿಜ್ಞಾನ ವಿಭಾಗದಲ್ಲಿ ಶೇ.88.88 ಫಲಿತಾಂಶದೊಂದಿಗೆ 10 ವಿದ್ಯಾರ್ಥಿಗಳು ಶೇ. 85 ಕ್ಕೂ ಹೆಚ್ಚು ಫಲಿತಾಂಶ ಪಡೆದಿರುತ್ತಾರೆ.
ಮನುಶ್ರೀ ಪಾಟೀಲ್ 584 (97.33%) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಉಮೈರಾ ಖಾನಂ ಡಿ.ಹೆಚ್.ಕೆ. 569 (94.83%) ಅಂಕ ಪಡೆದು, ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದು, ರಂಜಿತಾ ಆರ್. 567 (94.50%) ಅಂಕ ಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಅಧ್ಯಕ್ಷ ಎನ್. ಪರಶುರಾಮನಗೌಡ್ರು, ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ವಾಣಿ ಮಠಪತಿ, ರಿಜಿಸ್ಟ್ರಾರ್ ವೀರೇಶ್ ಪಟೇಲ್, ಡಾ. ಅಂಜು ಜಿ.ಎಸ್., ಹರ್ಷರಾಜ್ ಎ. ಗುಜ್ಜರ್, ಡೀನ್ ಪ್ರೊ. ಎಸ್. ಹಾಲಪ್ಪ, ಪ್ರಾಚಾರ್ಯರಾದ ಶ್ರೀಮತಿ ಕೆ. ಟಿ. ಸುಮಿತ್ರ, ಉಪಪ್ರಾಚಾರ್ಯ ಬಿ.ಜೆ. ಚೇತನ್ ಅವರುಗಳು ಅಭಿನಂದಿಸಿದ್ದಾರೆ.