ದಾವಣಗೆರೆ, ಏ. 10- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜಿಗೆ ಶೇ. 98 ರಷ್ಟು ಫಲಿತಾಂಶ ಲಭಿಸಿದೆ.
119 ಅತ್ಯುನ್ನತ ಶ್ರೇಣಿಯಲ್ಲಿ, 172 ವಿದ್ಯಾ ರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ದ್ದಾರೆ. ಕನ್ನಡ ಭಾಷಾ ವಿಷಯದಲ್ಲಿ ಏಳು, ಗಣಿತದಲ್ಲಿ ಏಳು, ಜೀವಶಾಸ್ತ್ರದಲ್ಲಿ ನಾಲ್ಕು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.
ಎಂ.ಸಿ. ಕೊಟ್ರಯ್ಯ 600 ಅಂಕಗಳಿಗೆ 587 (ಶೇ. 97.83) ಪಡೆದು ಕಾಲೇಜಿಗೆ ಪ್ರಥಮ ಸ್ಥಾನದಲ್ಲಿದ್ದಾರೆ.
ಕಾರ್ತಿಕ್ ಭೀಮ್‌ರಾವ್ ಖಟಾವ್‌ಕರ್ 600 ಕ್ಕೆ 582 (ಶೇ. 97) ದ್ವಿತೀಯ ಸ್ಥಾನ ಹಾಗೂ ಎ. ಸಾತ್ವಿಕ್ ಶಾಸ್ತ್ರಿ 600 ಕ್ಕೆ 581 (ಶೇ. 96.83) ತೃತೀಯ, ಡಿ.ಬಿ. ಧನಂಜಯ 600 ಕ್ಕೆ 579 (ಶೇ. 96.5), ಜಿ.ಕೆ.ವೈಷ್ಣವಿ 600 ಕ್ಕೆ 576 (ಶೇ. 96 ) ಅಂಕಗಳೊಂದಿಗೆ ನಾಲ್ಕನೇ ಹಾಗೂ ಐದನೇ ಸ್ಥಾನ ಗಳಿಸಿದ್ದಾರೆ.