ದಾವಣಗೆರೆ, ಏ. 5 – ತೆಲಂಗಾಣ ರಾಜ್ಯದ ಹೈದರಾಬಾದ್ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಇದೇ ದಿನಾಂಕ 8 ರಿಂದ 12 ರವರೆಗೆ 5 ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ ಪುರುಷರ ಹಾಗು ಮಹಿಳೆಯರ ನ್ಯಾಷನಲ್ ಸೀನಿಯರ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ -2024 ಸ್ಪರ್ಧೆಗೆ ತೀರ್ಪುಗರರಾಗಿ ಹರಿಹರ ತಾಲ್ಲೂಕಿನ ಗಂಗನರಸಿ ಗ್ರಾಮದವರಾದ ದಾವಣಗೆರೆ ವಾಸಿ ಎಂ. ಮಹೇಶ್ವರಯ್ಯ ಆಯ್ಕೆಯಾಗಿದ್ದಾರೆ.
ಮಹೇಶ್ವರಯ್ಯ ಅವರನ್ನು ಶ್ರೀ ಬೀರಲಿಂಗೇಶ್ವರ ವ್ಯಾಯಾಮ ಶಾಲೆ, ಗ್ರೂಪ್ ಆಫ್ ಐರನ್ ಗೇಮ್ಸ್, ನಗರಸಭೆ ವ್ಯಾಯಾಮ ಶಾಲೆಯ ಎಲ್ಲಾ ಹಿರಿಯ – ಕಿರಿಯ ಕ್ರೀಡಾಪಟುಗಳು, ಅಧಿಕಾರಿ ವರ್ಗದವರು, ಎಲ್ಲಾ ಅಭಿಮಾನಿಗಳು ಅಭಿನಂದಿಸಿದ್ದಾರೆ.