ದಾವಣಗೆರೆ, ಏ.5- ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತಿಚೇಗೆ ನಡೆದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಎಂಎಸ್ಎಂಇ ಐಡಿಯಾ ಹ್ಯಾಕಥಾನ್ 3.0 ಯಶಸ್ಸು ಕಂಡಿತು. ವಿವಿಧ ವಿಷಯಗಳಡಿ ಪ್ರತಿಭಾನ್ವಿತ ಮಹಿಳೆಯರು ಸಲ್ಲಿಸಿದ 26 ಅನನ್ಯ ಕಲ್ಪನೆಯ ಪ್ರಸ್ತಾಪಗಳೊಂದಿಗೆ ವಿದ್ಯಾಲಯವು ಅಗಾಧವಾದ ಪ್ರತಿಕ್ರಿಯೆಯನ್ನು ಪಡೆಯಿತು.
ಆತಿಥೇಯ ಸಂಸ್ಥೆಯಲ್ಲಿ ಕಠಿಣ ಸ್ಕ್ರೀನಿಂಗ್ ಪ್ರಕ್ರಿಯೆ ಅನುಸರಿಸಿ, 13 ಅಸಾಧಾರಣ ವಿಚಾರಗಳನ್ನು ಆಯ್ಕೆ ಮಾಡಿ, ಮುಂದಿನ ಸ್ಕ್ರೀನಿಂಗ್ ಹಂತಕ್ಕೆ ಕಳುಹಿಸಲಾಗಿತ್ತು. ಕಾಲೇಜಿನ ಮೂರು ಐಡಿಯಾಗಳಿಗೆ ಭಾರತ ಸರ್ಕಾರದ ಅಡಿಯಲ್ಲಿ ಬರುವ ಡಿಸಿಎಂಎಸ್ಎಂಇ ಕಚೇರಿಯಲ್ಲಿ ನಡೆದ ಕೊನೆಯ ಹಂತದ ಸ್ಕ್ರೀನಿಂಗ್ನಿಂದ ಅನುಮೋದನೆ ಸಿಕ್ಕಿದೆ.
ಅರ್ಹ ವಿಜೇತರಿಗೆ ಅವರ ಅದ್ಭುತ ಆಲೋಚನೆಗಳ ಅಭಿವೃದ್ಧಿಗಾಗಿ ತಲಾ 15ಲಕ್ಷ ರೂ.ಗಳ ಆರ್ಥಿಕ ಬೆಂಬಲವನ್ನು ನೀಡಲಾಗುವುದು.
ಎಂಎಸ್ಎಂಇ ವಲಯದಲ್ಲಿ ತಾಂತ್ರಿಕ ಪ್ರಗತಿ ಉತ್ತೇಜಿಸಲು, ಜೈನ್ ತಾಂತ್ರಿಕ ಮಹಾವಿದ್ಯಾಲಯದ ತಾಂತ್ರಿಕ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ ಆತಿಥೇಯ ಸಂಸ್ಥೆಗೆ 1ಕೋಟಿ ರೂ.ಗಳವರೆಗೆ ಹಣಕಾಸಿನ ಬೆಂಬಲ ನೀಡುವ ಜತೆಗೆ ಆವಿಷ್ಕಾರ ಮತ್ತು ಯಂತ್ರೋಪಕರಣ ಖರೀದಿಗೆ ಈ ಹಣ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ.