ದಾವಣಗೆರೆ, ಏ. 5- ಪ್ರಗತಿಯ ಮುಂಚೂಣಿ ಯಲ್ಲಿರುವ ಸ್ಥಳೀಯ ಹರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತವು 2023-24ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ 79.40.ಲಕ್ಷ ರೂ. ನಿವ್ವಳ ಲಾಭ ಗಳಿಸಿ ಅಭಿವೃಧ್ದಿ ಪಥದಲ್ಲಿ ಸಾಗಿದೆ ಎಂದು ಸಹಕಾರಿಯ ಅಧ್ಯಕ್ಷ ಬಿ.ಸಿ.ಉಮಾಪತಿ ಹಾಗೂ ಉಪಾಧ್ಯಕ್ಷ ಎಂ. ದೊಡ್ಡಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಸಹಕಾರಿಯು ಷೇರು ಸಂಗ್ರಹಣೆಯಲ್ಲಿಯೂ ಸಹ ಗಮನಾರ್ಹ ಪ್ರಗತಿ ಕಂಡಿದ್ದು, ಆರ್ಥಿಕ ವರ್ಷಾಂತ್ಯಕ್ಕೆ 1.64 ಕೋಟಿ ಷೇರು ಬಂಡವಾಳ, 13.20 ಕೋಟಿ ರೂ. ಗಳ ಠೇವಣಿ ಸಂಗ್ರಹವಾಗಿದೆ. 2.57 ಕೋಟಿ ರೂ. ನಿಧಿಗಳನ್ನು ಹೊಂದಿದೆ. 18.00 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದ್ದು ಆರ್ಥಿಕ ವರ್ಷಾಂತ್ಯಕ್ಕೆ ಸಹಕಾರಿಯು 12.53 ಕೋಟಿ ರೂಗಳ ಸಾಲವನ್ನು ಸದಸ್ಯರಿಗೆ ವಿತರಿಸಿದೆ ಎಂದು ತಿಳಿಸಿದರು.
ಸದಸ್ಯರು ಸಹಕಾರಿಯ ಮೇಲೆ ಇಟ್ಟಿರುವ ನಂಬಿಕೆ, ಅಭಿಮಾನ ಹಾಗೂ ಪ್ರೀತಿಯು ಸಹಕಾರಿಯ ಬೆಳ ವಣಿಗೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿಯ ನಿರ್ದೇಶಕರಾದ ಎಸ್.ಮಲ್ಲನಗೌಡ್ರು, ಅಂದನೂರು ಮುರುಗೇಶಪ್ಪ, ಹಾಲೇಶ ಅಂಗಡಿ, ಹೆಚ್.ಎಸ್.ಅವ್ವಣ್ಣಪ್ಪ, ಚೈತನ್ಯಕುಮಾರ ಸಿ.ಬಿ., ಸ್ವಾಮಿ ಎಸ್.ಎಂ., ಶಿವಶಂಕರ್.ಕೆ., ನಾಗರಾಜ ಹೆಚ್.ಎಂ, ಯೋಗೇಶ್ ಹೆಚ್.ಎಸ್., ಶ್ರೀಮತಿ ಅನಿತಾ ಸಿ.ಪಿ, ಶ್ರೀಮತಿ ಪುಷ್ಪಾವತಿ ಹೆಚ್.ವಿ. ವಿಶೇಷ ಆಹ್ವಾನಿತರಾದ ಶಿವಕುಮಾರ ಕೆ ಮತ್ತು ಬಾದಾಮಿ ಜಯಣ್ಣ. ಹಾಗೂ ಕಾರ್ಯದರ್ಶಿ ಚನ್ನಮಲ್ಲಿಕಾರ್ಜುನ. ಕೆ. ಸಹ ಕಾರ್ಯದರ್ಶಿ ಮಲ್ಲಿಕಾರ್ಜುನ ಎಂ.ಉಪಸ್ಥಿತರಿದ್ದರು.