ದಾವಣಗೆರೆ, ಏ.4- ಲೋಕಸಭಾ ಚುನಾವಣೆ-2024 ನೀತಿ ಸಂಹಿತೆ ಜಾರಿಯಾದಾಗಿನಿಂದ ಒಟ್ಟು 10,79,523 ರೂ.ಗಳ ಮೌಲ್ಯದ ಮದ್ಯ ಮತ್ತು ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತರಾದ ಟಿ.ವಿ.ಶೈಲಜಾ ತಿಳಿಸಿದ್ದಾರೆ.
ಒಟ್ಟು 123 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 374.655 ಲೀಟರ್ ಮದ್ಯ, 12.530 ಲೀಟರ್ ಬಿಯರ್, 15 ದ್ವಿಚಕ್ರ ವಾಹನಗಳ ಜಪ್ತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.