ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದ ಮೇಜರ್ ಮುಜರಾಯಿ ಇಲಾಖೆಯ ಶ್ರೀ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಇಂದು ಬೆಳಿಗ್ಗೆ 11.45ರಿಂದ ಮಧ್ಯಾಹ್ನ 12.45ರವರೆಗೆ ಜರುಗುವುದು.
ನಾಳೆ ಶುಕ್ರವಾರ ಬೆಳಗಿನ ಜಾವ 4ಕ್ಕೆ ಶ್ರೀ ಸ್ವಾಮಿಯ ಮಹಾ ರಥೋತ್ಸವ, ಮಧ್ಯಾಹ್ನ 3.30ರಿಂದ ಸಂಜೆ 6.30ರವರೆಗೆ ಸ್ವಾಮಿಯ ಮುಳ್ಳೋತ್ಸವ, ಕಾರಣಿಕ ಮಹೋತ್ಸವ, ದಿನಾಂಕ 6ರ ಶನಿವಾರ ಬೆಳಗ್ಗೆ 10.30 ಮತ್ತು ರಾತ್ರಿ 8ಕ್ಕೆ ಓಕುಳಿ, ಅಡ್ಡಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳು ನೆರವೇರಲಿವೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿ.ಕೆ. ಶೇಖರಪ್ಪ ತಿಳಿಸಿದ್ದಾರೆ.
ರಥೋತ್ಸವಕ್ಕೆ ಮೊದಲು ಸಾಂಪ್ರದಾಯಿಕವಾಗಿ ಕಂಕಣ ಧಾರಣೆ, ದೂಳಿ ಉತ್ಸವ, ನಾಗ ಸರ್ಪೋತ್ಸವ, ಜಿಗರಿ ವಾಹನೋತ್ಸವ, ಗಜ (ಆನೆ) ವಾಹನ ಅಂಬಾರಿ ಉತ್ಸವ ಇತ್ಯಾದಿ ಆಚರಣೆಗಳನ್ನು ಪಾರಂಪರಿಕ ಶ್ರದ್ಧಾ-ಭಕ್ತಿಗಳಿಂದ ನೆರವೇರಿಸಲಾಗುವುದು ಎಂದು ಅವರು ವಿವರಿಸಿದರು.
ಗ್ರಾಮದ ಮಾರುತಿ ಯುವಕ ಸಂಘದ ದಾಸೋಹ ಸಮಿತಿ ವತಿಯಿಂದ ಮತ್ತು ಕುಂದೂರು ಗ್ರಾಮಸ್ಥರು ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಸದ್ಭಕ್ತ ವೃಂದದವರಿಂದ ಅನ್ನ ದಾಸೋಹ ಸೇವೆ ಇರುತ್ತದೆ. ದಿನಾಂಕ 6 ಮತ್ತು 7ರಂದು ಬಯಲು ಜಂಗಿ ಕುಸ್ತಿಗಳು ನಡೆಯಲಿವೆ.