ದಾವಣಗೆರೆ, ಮಾ. 31 – ಕ್ರಿಕೆಟ್ ಅಕಾಡೆಮಿಯ 23ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವು ನಾಡಿದ್ದು ದಿನಾಂಕ 2 ರಂದು ಬೆಳಗ್ಗೆ 6.30ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.
ದಾವಣಗೆರೆ ಕ್ರಿಕೆಟ್ ಅಕಾಡೆಮಿ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಶಿಬಿರದಲ್ಲಿ 6 ರಿಂದ 18 ವರ್ಷದ ಆಸಕ್ತ ಕ್ರೀಡಾಪಟುಗಳಿಗೆ ಬಿಸಿಸಿಐ ಹಾಗೂ ಕೆ.ಎಸ್.ಸಿ.ಎ ಇಂದ ಮಾನ್ಯತೆ ಪಡೆದ ಕೋಚ್‌ಗಳಿಂದ ತರಬೇತಿ ನೀಡಲಾಗುವುದು. ಬೇಸಿಕ್‌ನಿಂದ ಅಡ್ವಾನ್ಸ್‌ವರೆಗೂ ಶಿಬಿರದಲ್ಲಿ ತರಬೇತಿ ನೀಡಲಾಗುವುದು.
ಜೊತೆಗೆ ಫಿಟ್ನೆಸ್ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆಯೂ ತರಬೇತಿ ನೀಡಲಾಗುವುದು. ಬೇರೆ ಬೇರೆ ತಂಡಗಳೊಂದಿಗೆ ಮ್ಯಾಚ್‌ಗಳನ್ನು ಆಯೋಜಿಸಲಾಗಿದೆ. ಏಪ್ರಿಲ್ 2 ರಿಂದ ಮೇ 30ರವರೆಗೆ ನಡೆಯುವ ಈ ಕ್ರಿಕೆಟ್ ತರಬೇತಿ ಶಿಬಿರದಲ್ಲಿ ಹೆಸರಾಂತ ಕ್ರಿಕೆಟ್ ಕೋಚ್‌ಗಳು ವಿಶೇಷ ತರಬೇತಿಯನ್ನು ನೀಡಲಿದ್ದಾರೆ.
ಈ ಕ್ರಿಕೆಟ್ ತರಬೇತಿ ಶಿಬಿರದ ಉಸ್ತುವಾರಿಯನ್ನು ಬಿಸಿಸಿಐ ಲೆವೆಲ್ ಎ ಕೋಚ್ ಗೋಪಾಲಕೃಷ್ಣ ಮತ್ತು ಕೆಎಸ್‌ಸಿಎ ಲೆವೆಲ್ ಓ ಕೋಚ್ ತಿಮ್ಮೇಶ್ ಅವರು ನಿರ್ವಹಿಸಲಿದ್ದಾರೆ. ವಿವರಕ್ಕೆ ಗೋಪಾಲಕೃಷ್ಣ (78996 10318), ಗುರು ಅಂಬರ್ಕರ್ (99645 99160) ತಿಮೇಶ್ (98804 4060) ಅವರನ್ನು ಸಂಪರ್ಕಿಸಬಹುದು.