ದಾವಣಗೆರೆ,ಮಾ.31- ನಗರದ ಬೂದಾಳ್ ರಸ್ತೆಯಲ್ಲಿರುವ ಮೆಹಕ್ ಶಾದಿ ಮಹಲ್ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಲಾಗಿದ್ದ ಫಜ್ಲೂರ್ ರೆಹಮಾನ್ ಎಂಬುವರ 7ಲಕ್ಷ ರೂ. ಮೌಲ್ಯದ ಲಾರಿಯನ್ನು ಕಳ್ಳತನ ಮಾಡಿದ್ದ ಇಬ್ಬರನ್ನು ಬಂಧಿಸಿರುವ ಗಾಂಧಿನಗರ ಪೊಲೀಸರು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಆಜಾದ್ ನಗರ (ಗಾಂಧಿನಗರ) ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ನಹೀಂ ಅಹಮದ್ ಟಿ.ಆರ್, ಹಾಗೂ ಸಿಬ್ಬಂದಿಯವರು ಮೊಹಮದ್ ಸಾಧಿಕ್ ಮತ್ತು ವಾಸಿಂ ಅಕ್ರಮ್‌ರನ್ನು ಬಂಧಿಸಿ, ಕೆ.ಎ-16-ಎ-8280ನೇ 10 ಗಾಲಿಯ ಅಶೋಕ್ ಲೇಲ್ಯಾಂಡ್ ಕಂಪನಿಯ ಲಾರಿ ಹಾಗೂ ಕೃತ್ಯ ಕಾಲಕ್ಕೆ ಉಪಯೋಗಿಸಿದ 1,30,000/-ರೂ ಬೆಲೆ ಬಾಳುವ ಬಿಳಿ ಮತ್ತು ಕಾಫಿ ಕಲರ್‍ನ ಸ್ಕೂಟರ್‍ನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿರುತ್ತಾರೆ.