ಆತ್ಮಿ ಅಸೋಸಿಯೇಷನ್, ಕಲರ್ಸ್ ಕಲ್ಚರಲ್ ಅಕಾಡೆಮಿ ವತಿಯಿಂದ ಇಂದು ಸಂಜೆ 5.30 ರಿಂದ 8.30 ರವರೆಗೆ ಚಿಂದೋಡಿ ಲೀಲಾ ಕಲಾ ಕ್ಷೇತ್ರದಲ್ಲಿ `ಕಲರ್ಸ್ ಸಮ್ಮಿಲನ-2024′ ಹಾಗೂ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶ್ರೀಮತಿ ಜಯ ರಾಘವೇಂದ್ರ ನಲ್ಲೂರು ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಮತಾ ಮಧು, ಬಿ. ಸೌಮ್ಯ, ಶೋಭಾ ಗೌಡರ್ ಆಗಮಿಸಲಿದ್ದು, ರಾಘವೇಂದ್ರ ಎಸ್. ನಲ್ಲೂರು, ಬಿ. ಪ್ರಸನ್ನ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬೆಳಿಗ್ಗೆ 8 ರಿಂದ 11 ರವರೆಗೆ ಆರೋಗ್ಯ ಶಿಬಿರ (ಉಚಿತವಾಗಿ 50 ಮಹಿಳೆಯರಿಗೆ ಥೈರಾಯಿಡ್ ತಪಾಸಣೆ ನಡೆಸಲಾಗುವುದು) ಆಯೋಜಿಸಲಾಗಿದೆ. ಮಧ್ಯಾಹ್ನ 3 ರಿಂದ 5.30 ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ನಡೆಯಲಿದೆ.
July 23, 2024