ದಾವಣಗೆರೆ, ಮಾ.29- ಯುವ ಸಬಲೀಕರಣ, ಕ್ರೀಡಾ ಇಲಾಖೆ, ಜಿಲ್ಲಾ ಖೋಖೋ ಸಂಸ್ಥೆ ಹಾಗೂ ನೋಂದಾಯಿತ ಖೋ-ಖೋ ಕ್ರೀಡಾ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 1ರಿಂದ 20ರ ವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿದಿನ ಬೆಳಗ್ಗೆ 6.30ರಿಂದ 8ರ ವರೆಗೆ ಮತ್ತು ಸಂಜೆ 5ರಿಂದ 6.30ರ ವರೆಗೆ ಉಚಿತ ಖೋಖೋ ಬೇಸಿಗೆ ತರಬೇತಿ ಶಿಬಿರ ಆಯೋಜಿಸಲಾಗಿದೆ.
ವಿವರಕ್ಕೆ ತರಬೇತಿ ಮೇಲ್ವಿಚಾರಕರಾದ ಎಚ್.ಎಂ. ರಘು (8792460980), ಮರುಳಸಿದ್ದಪ್ಪ (8105262830), ನಾಗರಾಜ್ ಉತ್ತಂಗಿ (9632158115), ಎ.ಬಿ. ಸಿದ್ದೇಶ್ (9743927252) ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಖೋಖೋ ಸಂಸ್ಥೆಯ ಅಧ್ಯಕ್ಷ ಜಿ.ಎಸ್.ಡಿ. ಮೂರ್ತಿ ಮತ್ತು ಕಾರ್ಯದರ್ಶಿ ಜೆ.ರಾಮಲಿಂಗಪ್ಪ ತಿಳಿಸಿದ್ದಾರೆ.