ನಗರದಲ್ಲಿಂದು ಯುಗಾದಿ ಕವಿಗೋಷ್ಠಿ

ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ಸ್ಫೂರ್ತಿ ಪ್ರಕಾಶನ ತೆಲಿಗೆ ಇವರುಗಳ ಸಂಯುಕ್ತಾಶ್ರಯದಲ್ಲಿ ಯುಗಾದಿ ಕವಿಗೋಷ್ಠಿ – ಕ್ರೋಧಿ ನಾಮ ಸಂವತ್ಸರದ ಸ್ವಾಗತ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 10 ಗಂಟೆಗೆ  ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದೆ.

ಕಸಾಪ ಜಿಲ್ಲಾಧ್ಯಕ್ಷರಾದ ಬಿ. ವಾಮದೇವಪ್ಪ  ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಹೆಚ್. ರಾಜಶೇಖರ್ ಗುಂಡಗಟ್ಟಿ ಅವರ ಅಧ್ಯಕ್ಷತೆಯ್ಲಲಿ ಯುಗಾದಿ ಸಂಭ್ರಮ ವಿಷಯ ಕುರಿತು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಕೆ.ಎಸ್. ವೀರಭದ್ರಪ್ಪ ತೆಲಿಗಿ ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಯೋಧ ರಾಮಚಂದ್ರಪ್ಪ, ಚಿಂತಕ-ಸಾಹಿತಿ ಹೆಚ್.ವಿ. ಮಂಜುನಾಥಸ್ವಾಮಿ, ಕನ್ನಡ ಉಪನ್ಯಾಸಕ ಮಾರುತಿ ಶಾಲೆ ಮನೆ, ಸ್ಫೂರ್ತಿ ಪ್ರಕಾಶನದ ಅಧ್ಯಕ್ಷ ಎಂ. ಬಸವರಾಜ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಸುನೀತಾ ಪ್ರಕಾಶ್ ಉಪಸ್ಥಿತರಿರುವರು.

error: Content is protected !!