ಖರೀದಿ ಕೇಂದ್ರಕ್ಕೆ ರಾಗಿ ನೀಡಿದ ರೈತರು ದಾಖಲೆ ಸಲ್ಲಿಸಲು ಡಿಸಿ ಸೂಚನೆ

ದಾವಣಗೆರೆ, ಮಾ.25- 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಗಳೂರು ರಾಗಿ ಖರೀದಿ ಕೇಂದ್ರಕ್ಕೆ ರಾಗಿ ನೀಡಿರುವ ಹೊರ ತಾಲ್ಲೂಕು, ಹೊರ ಜಿಲ್ಲೆಯಲ್ಲಿನ ಪಟ್ಟಿಯಲ್ಲಿರುವ 82 ರೈತರು ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.

82 ರೈತರಿಂದ ಅರ್ಹ ದಾಖಲೆಗಳನ್ನು ಸಂಗ್ರಹಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ರೈತರು ಜಗಳೂರು ತಾಲ್ಲೂಕು ಕಚೇರಿಯ ಆಹಾರ ಶಾಖೆಯನ್ನು ಸಂಪರ್ಕಿಸಿ 7 ದಿನಗಳ ಒಳಗಾಗಿ ಸಂಬಂಧಪಟ್ಟ ದಾಖಲೆಗಳ ಜೆರಾಕ್ಸ್ ಪ್ರತಿ, 2022-23 ನೇ ಸಾಲಿನ ಮುಂಗಾರಿನ ರಾಗಿ ಬೆಳೆದ ಪಹಣಿ ಪ್ರತಿ, ಫೂಟ್ಸ್ ಐಡಿ, ಗ್ರೆನ್ ವೋಚರ್, ಆಧಾರ್ ಕಾರ್ಡ್, ವೇ-ಬ್ರಿಡ್ಜ್ ರಶೀದಿ (ಇದ್ದಲ್ಲಿ) ಪಹಣಿಯಲ್ಲಿರುವ ವಾರಸುದಾರರು ಮೃತ ಪಟ್ಟಿದ್ದಲ್ಲಿ ವಂಶವೃಕ್ಷ ದಾಖಲೆ, ಪಹಣಿ ಜಂಟಿ ಖಾತೆಯಲ್ಲಿದ್ದರೆ, 20/-ಸ್ಟಾಂಪ್ ಪೇಪರ್ ಮೇಲೆ ನೋಟರಿಯಿಂದ ದೃಢೀಕೃತ ಒಪ್ಪಿಗೆ ಪ್ರಮಾಣ ಪತ್ರ ತಾಲ್ಲೂಕು ಕಚೇರಿ ಜಗಳೂರಿನ ಆಹಾರ ಶಾಖೆಗೆ  ನೀಡುವಂತೆ ಹೇಳಿದ್ದಾರೆ.

error: Content is protected !!