ನಗಿಸಿದವರಿಗೆ ನಗದಾರುಲಕ್ಷ

ರಾಣೇಬೆನ್ನೂರು, ಮಾ.25- ಗೋವಾಕ್ಕೆ ಹೋಗಿ ಅರಾಮ ಮಜಾ ಮಾಡನಬಾ, ನೀನು ಎಸ್ ಅಂದರ್ ಸಿಂಗಾಪೂರಗೆ ಹೋಗಾನಾ, ಊಟಿ, ಕೆಮ್ಮಣ್ಣ ಗುಂಡಿ ನೀ ಹೇಳಿದಲ್ಲಿಗೆ ಕರ್ಕೊಂಡು ಹೋಗ್ತೀನಿ ಅವ್ನ್ ಬಿಟ್ಟ ನನ್ನ ಜೊತೆ ಬಾ ರತಿ ಮುಂತಾದ ಆಮಿಷಗಳು, ಚಿತ್ರಗೀತೆಗಳೊಂದಿಗೆ ನರ್ತಿಸುವುದು, ಎರಡರ್ಥದ ಪದ ಬಳಕೆ ಹೀಗೆ ಅವರನ್ನು ಮುಟ್ಟದೆ ತಮ್ಮ ವಿವಿಧ ವರ್ತನೆಗಳೊಂದಿಗೆ ನಗಿಸಲು ಪ್ರಯತ್ನಿಸಿ ವಿಫಲರಾದವರು ಸಾವಿರಾರು ಜನರು.

ಪ್ರತಿ ವರ್ಷದಂತೆ ಈ ವರ್ಷವೂ ನಾಳೆ ದಿನಾಂಕ 26 ರ ಮಂಗಳವಾರ ಸಂಜೆ ಇಲ್ಲಿನ ಕುಂಬಾರ ಓಣಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಎದುರು ರತಿ-ಮನ್ಮಥರಾಗಿ ಕುಳಿತುಕೊಳ್ಳುವ ಕುಮಾರ ಹಡಪದ ಹಾಗೂ ಗದಿಗೆಪ್ಪ ರೊಡ್ಡನವರ ಇವರನ್ನು ನಗಿಸಲು ಮಾಡುತ್ತಿರುವ ಪ್ರಯತ್ನ ಮೂರು ದಶಕ ಕಂಡಿದೆ.

ಸುಮಾರು ಆರು ದಶಕಗಳ ಹಿಂದೆ ಅಂದಿನ ಕೆಲ ಉತ್ಸಾಹಿ ಯುವಕರ ಪಡೆ ಕಾಮ-ರತಿಯರ ವೇಷ ಧರಿಸಿ ನಗದೇ ಕುಳಿತು ಹಾಕಿಕೊಂಡ ಬಂದ ಪರಂಪರೆಯನ್ನು ಇಂದಿನ ಯುವಕರು ಮುಂದುವರೆಸಿದ್ದಾರೆ. ರಾಣೇಬೆನ್ನೂ ರಿನ ಈಗಿನ  ಜೀವಂತ ಕಾಮ ರತಿಯರನ್ನು ನಗಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಈ ಬಾರಿ ಕುಳಿತುಕೊಳ್ಳುವ ಈ ಜೋಡಿಯನ್ನ ನಗಿಸಿದವರಿಗೆ ಕೊಡಲು ಆರು ಲಕ್ಷ ನಗದು ಹಣ ಸಂಗ್ರಹಿಸಲಾಗಿದೆ.  ದಿನಾಂಕ 27 ರಂದು ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಓಕಳಿ ಎರಚುವುದಿದೆ.

error: Content is protected !!