ದಾವಣಗೆರೆ,ಮಾ.24- ಸಾದರ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಸಾದರ ನೌಕರರ ಬಳಗ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳಗದ ಅಧ್ಯಕ್ಷ ಕೆ. ನಾಗಪ್ಪ ತಿಳಿಸಿದ್ದಾರೆ.
2023-24ನೇ ಸಾಲಿನ ಪ್ರಥಮ ವರ್ಷದ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿರುವ, ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ 5 ವರ್ಷದ ಅವಧಿಗೆ ಆರ್ಥಿಕ ನೆರವು ನೀಡಲಾಗುವುದು. ಆಸಕ್ತರು ದಿನಾಂಕ ಬರುವ ಏಪ್ರಿಲ್ 5 ರೊಳಗೆ ಅರ್ಜಿ ಸಲ್ಲಿಸಬಹುದು.
ವಿವರಕ್ಕೆ ಸಂಪರ್ಕಿಸಿ : ಸಾದರ ಪತ್ತಿನ ಸಹಕಾರ ಬ್ಯಾಂಕ್, 2000/ಎ-28,16ನೇ ತಿರುವು, ತರಳಬಾಳು ಬಡಾವಣೆ, ವಿದ್ಯಾನಗರ ಮುಖ್ಯರಸ್ತೆ, ದಾವಣಗೆೆರೆ. ಮೊ. 7829043544, 9844501366, 9886339984, 9844369744.