ಜಿಗಳಿಯಲ್ಲಿ ಇಂದು ಭೂತ ಸೇವೆ

ಜಿಗಳಿಯಲ್ಲಿ ಇಂದು ಭೂತ ಸೇವೆ

ಮಲೇಬೆನ್ನೂರು ಸಮೀಪದ ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ವಿವಿಧ ಕಾರ್ಯಕ್ರಮಗಳ ನಂತರ ಸಂಜೆ 7.30 ರಿಂದ ಶ್ರೀ ರಂಗನಾಥಸ್ವಾಮಿ, ಶ್ರೀ ಬೀರಲಿಂಗೇಶ್ವರ ಸ್ವಾಮಿ ಮತ್ತು ಜಿ.ಬೇವಿನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವರುಗಳ ಸಮ್ಮುಖದಲ್ಲಿ ಭೂತಗಳ ಸೇವೆ ನಡೆಯಲಿದ್ದು, ನಂತರ ದೇವರುಗಳ ಉತ್ಸವ ಜರುಗಲಿದೆ.

ನಾಳೆ ಮಂಗಳವಾರ ಶ್ರೀ ಚೌಡೇಶ್ವರಿ ದೇವಿ ಹಬ್ಬ ನಡೆಯಲಿದೆ ಎಂದು ಗ್ರಾಮದ ಗೌಡ್ರ ಬಸವರಾಜಪ್ಪ ತಿಳಿಸಿದ್ದಾರೆ.

error: Content is protected !!