ಅಕ್ಕಮಹಾದೇವಿ ಸಮಾಜದ ವತಿಯಿಂದ ಇಂದು ಹುಣ್ಣಿಮೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಶ್ರೀಮತಿ ಕೆ.ಕೆ. ಸುಶೀಲಮ್ಮ ಅಧ್ಯಕ್ಷತೆ ವಹಿಸುವರು.
ಸುನೀತಾ ಇಂದೂಧರ್, ಉಮಾ ಎಮ್ಮಿ ಹಾಗೂ ಕಾಯಿ ಮಂಜುಳಾ ಅವರು ನಗರದೇವತೆ ಶ್ರೀ ದುಗ್ಗಮ್ಮ ದೇವರ ಜಾತ್ರಾ ವಿಶೇಷತೆ, ಅಂತರರಾಷ್ಟ್ರೀಯ ಮಹಿಳಾ ದಿನ ಹಾಗೂ ಹೋಳಿ ಹುಣ್ಣಿಮೆ ವಿಷಯವಾಗಿ ಮಾತನಾಡುವರು.
ನೀಲಗುಂದ ಜಯಮ್ಮ ಅವರು ಚಿಂತನ-ಮಂಥನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಸಮಾಜದ ಕಾರ್ಯದರ್ಶಿ ಸುವರ್ಣಮ್ಮ ದೊಗ್ಗಳ್ಳಿ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿರುವರು.