ನೋವು ಕೊನೆಗೊಂಡಾಗ ಜೀವನ ಪ್ರಾರಂಭವಾಗುತ್ತದೆ

ಮಧ್ಯ ಕರ್ನಾಟಕದಲ್ಲಿ ಹೆಸರಾಂತ ವೈದ್ಯಕೀಯ ಕಾಲೇಜು ಎಂದು ಖ್ಯಾತಿ ಪಡೆದಿರುವ ದಾವಣಗೆರೆಯ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಮೂಳೆ ಚಿಕಿತ್ಸಾ ವಿಭಾಗವು ರೋಗಿಗಳಿಗೆ ಆರೈಕೆ ಮತ್ತು ಶಸ್ತ್ರ ಚಿಕಿತ್ಸೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. 

ಕೆಲವು ವರ್ಷಗಳ ಹಿಂದೆ ಅತ್ಯಾಧುನಿಕ ಕೀಲು, ಮೂಳೆ ಶಸ್ತ್ರ ಚಿಕಿತ್ಸೆಗಳಿಗೆ ರೋಗಿಗಳು ಬೆಂಗಳೂರು, ಮಂಗಳೂರು, ಮುಂಬೈಗೆ ತೆರಳುವ ಪರಿಸ್ಥಿತಿ ಇತ್ತು. ಆದರೆ, ಈಗ ಎಲ್ಲಾ ತರಹದ ಆಧುನಿಕ ಮೂಳೆ ಶಸ್ತ್ರ ಚಿಕಿತ್ಸೆಗಳನ್ನು ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಹೊಂದಿಕೊಂಡಿ ರುವ ಬಾಪೂಜಿ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ.

ಈ ಆಸ್ಪತ್ರೆಯ ಮೂಳೆ ಚಿಕಿತ್ಸಾ ವಿಭಾಗವು ಅತ್ಯುತ್ತಮ ಶಸ್ತ್ರ ಚಿಕಿತ್ಸಾ ಕೊಠಡಿಯನ್ನು ಹೊಂದಿದ್ದು, ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಉಪಕರಣ ಗಳೊಂದಿಗೆ ಸಜ್ಜುಗೊಂಡಿದೆ. ಇಲ್ಲಿಯವರೆಗೂ ನಾವು 130 ಪೂರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗಳು, 110 ಪೂರ್ಣ ಚಪ್ಪೆ ಕೀಲು ಬದಲಿ ಶಸ್ತ್ರಚಿಕಿತ್ಸೆಗಳು, 70 ಮೆನಿಸೆಕ್ಟಮಿ, 80 ಎ.ಸಿ.ಲಿಗಮೆಂಟ್ ಪುನನಿರ್ಮಾಣ, 130 ರೋಗ ನಿರ್ಣಯದ ಆರ್ಥೋಸ್ಕೋಪಿ, 60 ಬೆನ್ನು ಮೂಳೆಯ ಶಸ್ತ್ರಚಿಕಿತ್ಸೆಗಳು, 50 ನವಜಾತ ಶಿಶುಗಳಲ್ಲಿ ಶಸ್ತ್ರಚಿಕಿತ್ಸೆಗಳನ್ನು ವಕ್ರಪಾದ ಸಂಬಂಧಿತ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದೇವೆ. ಭುಜದ ತೊಂದರೆಗೆ ಸಂಬಂಧಿಸಿದ ಆರ್ಥೋಸ್ಕೋಪಿ ಯನ್ನು ಹೊಸದಾಗಿ ಶುರು ಮಾಡಲಾಗಿದೆ. ನಮ್ಮ ವಿಭಾಗದಲ್ಲಿ ಮೇಲೆ ತಿಳಿಸಿರುವ ಎಲ್ಲಾ ಶಸ್ತ್ರಚಿಕಿತ್ಸೆ ಗಳಿಗೆ ದೀರ್ಘಕಾಲ ಪರಿಣಿತಿ ಹೊಂದಿರುವ ಮೂಳೆಶಸ್ತ್ರಚಿಕಿತ್ಸಾ ತಜ್ಞರ ತಂಡವನ್ನು ಹೊಂದಿದ್ದೇವೆ.

ಈ ಶಸ್ತ್ರಚಿಕಿತ್ಸೆಗಳಲ್ಲಿ ಹೆಚ್ಚಿನವುಗಳನ್ನು ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಮತ್ತು ಸಂಪೂರ್ಣ ಸುರಕ್ಷಾ, ಸ್ಟಾರ್ ಹೆಲ್ತ್, ಯಶಸ್ವಿನಿ ಯೋಜನೆಯಂತಹ ವಿಮಾ ರಕ್ಷಣೆಯ ಅಡಿಯಲ್ಲಿ ನಡೆಸಲಾಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೂ ಎಲ್ಲಾ ಚಿಕಿತ್ಸೆಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಿರುತ್ತದೆ. ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯೂ ಬಾಪೂಜಿ ಆರೋಗ್ಯ ಕಾರ್ಡ್ ಅನ್ನು ಜಾರಿಗೊಳಿಸಿದೆ.

ಜೆಜೆಎಂಎಂಸಿಯ ನಿರ್ದೇಶಕ ಸತ್ಯನಾರಾಯಣ, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಕ್ಲ ಶೆಟ್ಟಿ, ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕುಮಾರ್ ಇವರುಗಳ ದಕ್ಷ ಆಡಳಿತ, ನಿರ್ದೇಶನ, ಸಹಕಾರ ಹಾಗೂ ಪ್ರೋತ್ಸಾಹದಿಂದ ಬಹಳಷ್ಟು ಕೈಗೆಟುವ ದರದಲ್ಲಿ ಆರೋಗ್ಯ ಸೇವೆಗಳು ಲಭ್ಯವಿರುತ್ತದೆ.

ಕೀಲು ಮೂಳೆ ಸಂಬಂಧಿತ ರೋಗಗಳ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುವ ಉದ್ದೇಶದಿಂದ ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ಅನೇಕ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ಸಮುದಾಯದ ಆರೋಗ್ಯ ಸುಧಾರಣೆ ಆಗುವುದಲ್ಲದೇ ಆರೋಗ್ಯವಂತ ಸದೃಢ ಸಮಾಜದ ನಿರ್ಮಾಣವಾಗುತ್ತದೆ.

ಆರೋಗ್ಯವಂತ ಹಾಗೂ ಕ್ರಿಯಾಶೀಲ ಸಮಾಜ ನಿರ್ಮಿಸುವಲ್ಲಿ ಕೀಲು-ಮೂಳೆ ಚಿಕಿತ್ಸಾ ವಿಭಾಗದ ತಜ್ಞ ವೈದ್ಯರುಗಳ ತಂಡ ಹಾಗೂ ಬಾಪೂಜಿ ಆಸ್ಪತ್ರೆಯ ಪಾತ್ರ ಮುಖ್ಯವಾಗಿರುತ್ತದೆ. ದಾವಣಗೆರೆ ಸುತ್ತಮುತ್ತಲಿನ ಜನರು ನಾವು ನೀಡುತ್ತಿರುವ ಈ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯವಂತ ಸಮಾಜದ ಕಡೆ ಹೆಜ್ಜೆ ಇಡಬೇಕೆಂದು ಆಶಿಸುತ್ತೇನೆ.

ನೋವು ಕೊನೆಗೊಂಡಾಗ ಜೀವನ ಪ್ರಾರಂಭವಾಗುತ್ತದೆ - Janathavani– ಡಾ. ಟಿ.ಎಂ.ರವಿನಾಥ್, ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು,ಮೂಳೆಚಿಕಿತ್ಸೆ ವಿಭಾಗ, ಜೆಜೆಎಂಎಂಸಿ, ದಾವಣಗೆರೆ.

error: Content is protected !!