ಸಾಣೇಹಳ್ಳಿ, ಮಾ.20- ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 12 ರಿಂದ 30ರವರೆಗೆ `ಮಕ್ಕಳ ಹಬ್ಬ’ (ಬೇಸಿಗೆ ಶಿಬಿರ) ವನ್ನು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಕೋಲಾಟ, ಚಿತ್ರಕಲೆ, ಮಣ್ಣಾಟ, ವೀರಗಾಸೆ, ಯೋಗಾಸನ, ರಂಗಾಟಗಳು, ದಿನಕ್ಕೊಂದು ಪದ್ಯ ರಚನೆ, ಮುಖವಾಡ ತಯಾರಿ, ಕಥೆ ಹೇಳುವ ಮತ್ತು ಕಥೆ ಕಟ್ಟುವ ತರಗತಿ, ಮಕ್ಕಳ ಸಿನಿಮಾ ವೀಕ್ಷಣೆ, ಮಕ್ಕಳ ತೇರು, ಪರಿಸರದ ಮೇಲಿನ ಉಪನ್ಯಾಸ, 3 ಅಥವಾ 4 ನಾಟಕಗಳ ತಯಾರಿ ಹಾಗೂ ಪ್ರದರ್ಶನ ಮುಂತಾದ ಚಟುವಟಿಕೆಗಳಿರುತ್ತವೆ.
ಶಿಬಿರದ ಅವಧಿಯಲ್ಲಿ ಮಕ್ಕಳು ಸಾಣೇಹಳ್ಳಿಯಲ್ಲಿಯೇ ಇರುವುದು ಕಡ್ಡಾಯವಾಗಿದ್ದು, ಅವರಿಗೆ ಊಟ-ವಸತಿಯ ಸೌಲಭ್ಯವಿದೆ. 10 ರಿಂದ 14 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದು. ವಿವರಕ್ಕೆ ಸಂಪರ್ಕಿಸಿ : 8861043553, 9972007015.