ದಾವಣಗೆರೆ, ಮಾ. 20- ಶ್ರೀ ಭಗವಾನ್ ಮಹಾವೀರ್ ಜೈನ್ ಹಾಸ್ಪಿಟಲ್ ವತಿಯಿಂದ ನಾಡಿದ್ದು ದಿನಾಂಕ 23ರ ಶನಿವಾರ ಬೆಳಿಗ್ಗೆ 8.30 ರಿಂದ ಸಂಜೆ 4ರ ವರೆಗೆ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆಯನ್ನು ಶ್ರೀ ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ನಡೆಸಲಾಗುವುದು.
ಆಸ್ಪತ್ರೆಯು ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂದರ್ಭದಲ್ಲಿ ಈ ವಿಶೇಷ ವೈದ್ಯಕೀಯ ಮೆಗಾ ಶಿಬಿರವನ್ನು ಏರ್ಪಡಿಸಲಾಗಿದೆ.
ತಜ್ಞ ವೈದ್ಯ ಡಾ. ಎನ್. ಅಭಿರಾಮ್, ಕಿವಿ, ಮೂಗು ಗಂಟಲು ತಜ್ಞ ಡಾ. ತುಳಸಿನಾಯ್ಕ, ಸ್ತ್ರೀರೋಗ ತಜ್ಞರಾದ ಡಾ. ಕೆ.ಜಿ.ಎಂ. ಪ್ರೇಮಲೀಲಾ, ಆರ್ಥೋಪೆಡಿಕ್ ವಿಭಾಗದ ನುರಿತ ವೈದ್ಯರುಗಳು ಆರೋಗ್ಯ ತಪಾಸಣೆ ನಡೆಸುವರು.
ವಿವರಕ್ಕೆ ಸಂಪರ್ಕಿಸಿ : 08192-470872, 96060 48421, 96060 48422, 96060 48423