ದಾವಣಗೆರೆ, ಮಾ.20- ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹಳೇ ತೋಳಹುಣಸೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜಿಲ್ಲೆಯಲ್ಲಿನ ಗ್ರಾಮೀಣ ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿ ಆಯೋಜಿಸಲಾಗಿದೆ. ಇದೇ ದಿನಾಂಕ 26ರಿಂದ ವಿದ್ಯುತ್ ಪಂಪ್ಸೆಟ್ ಮತ್ತು ಮೋಟಾರ್ ರಿವೈಂಡಿಂಗ್ ತರಬೇತಿ ನಡೆಯಲಿದೆ. ಮಹಿಳೆಯರಿಗೆ ಇದೇ ದಿನಾಂಕ 31ರಿಂದ ಬ್ಯೂಟಿ ಪಾರ್ಲರ್ ಮ್ಯಾನೇಜ್ ಮೆಂಟ್ ತರಬೇತಿ ಏರ್ಪಡಿಸಲಾಗಿದೆ. ತರಬೇತಿಯು ಊಟ ಮತ್ತು ವಸತಿಯೊಂದಿಗೆ 30 ದಿನಗಳ ಕಾಲ ನಡೆಯಲಿದ್ದು, 18 ರಿಂದ 44 ವಯೋಮಿತಿಯ ಬಿಪಿಎಲ್ ಕಾರ್ಡ್ ಹೊಂದಿದ ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಹೆಸರು ನೋಂದಾಯಿಸಬಹುದು. ವಿವರಕ್ಕೆ ಸಂಪರ್ಕಿಸಿ : 7975139332, 7019980484, 9964111314, 9483386143, 9538395817.
March 1, 2025