ದಾವಣಗೆರೆ, ಮಾ.20- ಲೋಕಸಭಾ ಚುನಾವಣೆ ಅಭ್ಯರ್ಥಿಯಾಗಿ ಜಿ.ಬಿ. ವಿನಯ್ ಕುಮಾರ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡದೇ ಇದ್ದಲ್ಲಿ, ಕಾಂಗ್ರೆಸಿನ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಅಭಿಮಾನಿಗಳು ಒತ್ತಾಯಿಸುತ್ತೇವೆ ಎಂದು ರಘು ದೊಡ್ಮನಿ ತಿಳಿಸಿದರು.
ಜಿ.ಬಿ. ವಿನಯ್ ಕುಮಾರ್ ಅವರನ್ನು ಕಡೆಗಣಿಸಿ ಶಾಮನೂರು ಕುಟುಂಬಕ್ಕೆ ಟಿಕೆಟ್ ಸೂಚಿಸಿದರೆ, ಪಕ್ಷದ ಮುಖಂಡರ ಅಸಮಾಧಾನದಿಂದ ಪಕ್ಷಕ್ಕೆ ಹಿನ್ನಡೆ ಆಗಬಹುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು. ಜಿಲ್ಲೆಯ ಜನರ ಸಮಸ್ಯೆ ಅರಿತ ವಿನಯ್ ಕುಮಾರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಕೆ. ಉಮೇಶ್, ಮಹಮ್ಮದ್ ಅಲ್ತಾಫ್ ಹುಸೇನ್, ಹೇಮಂತ್ ಕುಮಾರ್, ಇರ್ಫಾನ್, ಶಿವಕುಮಾರ್, ವಿಜಯಕುಮಾರ್, ಪರಶುರಾಮ್, ಮತ್ತು ಪ್ರಮುಖರು ಇದ್ದರು.