ರಾಣೇಬೆನ್ನೂರು, ಮಾ.20- ಶಿರಹಟ್ಟಿ, ರೋಣ ಮತ್ತು ಗದಗ ಸೇರಿದಂತೆ ಗದಗ ಜಿಲ್ಲೆಯ ಮೂರು ವಿದಾನಸಭಾ ಕ್ಷೇತ್ರಗಳು ಹಾಗೂ ಹಾವೇರಿ ಜಿಲ್ಲೆಯ ಹಾವೇರಿ, ಹಾನಗಲ್ಲ, ಹಿರೇಕೆರೂರು, ಬ್ಯಾಡಗಿ ಮತ್ತು ರಾಣೇಬೆನ್ನೂರು ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನ ಮೇ 7 ರಂದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
ಪುರುಷರು 1,19,169, ಮಹಿಳೆಯರು 1,17,960 ಒಟ್ಟು 2,37,140 ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮತದಾರರು ಸೇರಿದಂತೆ ಲೋಕಸಭಾ ಕ್ಷೇತ್ರದಲ್ಲಿ 8,95,366 ಪುರುಷ, 8,82,430 ಮಹಿಳೆಯರು
ಒಟ್ಟು17,77,877 ಮತದಾರರಿದ್ದಾರೆ. ರಾಣೇಬೆನ್ನೂರಿನ 266 ಮತಗಟ್ಟೆಗಳು ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು 1982 ಮತಗಟ್ಟೆಗಳಿವೆ.
ಹಾವೇರಿ ಜಿಲ್ಲೆಯ 18, ಗದಗ ಜಿಲ್ಲೆಯ 10 ಸೇರಿದಂತೆ ಒಟ್ಟು 28 ಚೆಕ್ ಪೋಸ್ಟ್‌ಗಳು, ಹಾವೇರಿ ಜಿಲ್ಲೆಯ 10, ಗದಗ ಜಿಲ್ಲೆಯ 9 ಸೇರಿದಂತೆ ಒಟ್ಟು19 ವಿಡಿಯೋ ಕಣ್ಗಾವಲು ತಂಡಗಳಿವೆ. ಕ್ಷೇತ್ರದಲ್ಲಿ 8 ವಿಡಿಯೋ ವೀಕ್ಷಣಾ ತಂಡಗಳಿವೆ, 11 ಲೆಕ್ಕ ಪರಿಶೋಧಕರ ತಂಡಗಳು, 8 ಸಹಾಯಕ ಖರ್ಚು-ವೆಚ್ಚ ತಂಡಗಳು. 24 ಕ್ಷಿಪ್ರ ಪಡೆ, 191 ಸೆಕ್ಟರ್ ಅಧಿಕಾರಿಗಳಿದ್ದಾರೆ.
85 ವರ್ಷ ಮೇಲ್ಪಟ್ಟ 15,521 ಹಾಗೂ 27,434 ಅಂಗವಿಕಲ ಸೇರಿದಂತೆ ಒಟ್ಟು ಇರುವ 42,955 ಮತದಾರರಲ್ಲಿ ಮನೆಯಲ್ಲಿಯೇ ಮತದಾನ ಮಾಡಲು ಇಷ್ಟ ಪಟ್ಟವರು ಮೊದಲೇ ಮತದಾನದ ಕೋರಿಕೆ ಪತ್ರ ಪಡೆದು ನಮೂನೆಯನ್ನು ಭರ್ತಿ ಮಾಡಿ ಸಹಿ ಮಾಡಿಕೊಟ್ಟರೆ ಅವರಿಗೆ ಅವಕಾಶ ಕಲ್ಪಿಸಿ ಕೊಡಲಾಗುತ್ತದೆ ಎಂಬ ಮಾಹಿತಿಯನ್ನು ಚುನಾವಣಾ ಇಲಾಖೆ ನೀಡಿದೆ.