ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಣೆ

ಲೋಕಸಭಾ ಚುನಾವಣೆ 

ದಾವಣಗೆರೆ, ಮಾ. 19 – ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿದ್ದು ಚುನಾವಣಾ ಅಧಿಸೂಚನೆಯು ಏಪ್ರಿಲ್ 12 ರಿಂದ ಜಾರಿಗೆ ಬರಲಿದ್ದು ಜಿಲ್ಲಾಧಿ ಕಾರಿ ಡಾ. ಎಂ.ವಿ. ವೆಂಕಟೇಶ್ ಅವರು ಚುನಾವಣಾಧಿಕಾರಿಯಾಗಿರುತ್ತಾರೆ. 

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಗಳ ಕಚೇರಿ ಸಭಾಂಗಣ ಚುನಾವಣಾಧಿ ಕಾರಿಗಳ ಕಚೇರಿಯಾಗಿರುತ್ತದೆ. ನಾಮ ಪತ್ರಗಳ ಸ್ವೀಕೃತಿ ಇಲ್ಲಿಯೇ ನಡೆಯ ಲಿದೆ. ಅಪರ ಜಿಲ್ಲಾಧಿಕಾರಿ ಸೈಯದಾ ಆಫ್ರಿನ್ ಭಾನು ಎಸ್. ಬಳ್ಳಾರಿ ಇವರು ಸಹಾಯಕ ಚುನಾವಣಾಧಿಕಾರಿಯಾಗಿ ರುವರು. ಉಳಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳ  ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. 

ಚುನಾವಣಾಧಿಕಾರಿಗಳ ಹೆಸರು, ಸಂಪರ್ಕದ ವಿವರ; ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಇವರ ಮೊಬೈಲ್ ಸಂಖ್ಯೆ; 72597 00555, ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಸೈಯದಾ ಅಫ್ರಿನ್ ಭಾನು ಎಸ್. ಬಳ್ಳಾರಿ ಇವರ ಮೊಬೈಲ್ ಸಂಖ್ಯೆ;78991 55524, ಜಗಳೂರು ಕ್ಷೇತ್ರ; ಸಹಾಯಕ ಚುನಾವಣಾಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಸಿದ್ದರಾಮ್ ಮಾರಿಹಾಳ್ 99014 46664, ಹರಪನಹಳ್ಳಿ; ಹರಪನಹಳ್ಳಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ 94839 66271, ಹರಿಹರ; ತಾಂತ್ರಿಕ ಸಹಾಯಕರು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಉಪನಿರ್ದೇಶಕರು ಭೂ ದಾಖಲೆಗಳ ಇಲಾಖೆ ಭಾವನ.ಬಿ 94801 31892, ದಾವಣಗೆರೆ ಉತ್ತರ; ಜಿಲ್ಲಾ ನೋಂದಣಾಧಿಕಾರಿ ಇಸ್ಮಾಯಿಲ್ ಎಫ್. ದಂಬಾರಮಾತೂರ 98801 22099, ದಾವಣಗೆರೆ ದಕ್ಷಿಣ; ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ 99029 82111, ಮಾಯಕೊಂಡ; ದಾವಣಗೆರೆ ಉಪವಿಭಾಗಾಧಿಕಾರಿ ದುರ್ಗಶ್ರೀ. ಎನ್ 94495 75975, ಚನ್ನಗಿರಿ; ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ರವಿ.ಎಸ್ 97314 28990 ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ಸಹಾಯಕ ಚುನಾವಣಾಧಿಕಾರಿಯಾಗಿ ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್.ವಿ ಇವರು ಕಾರ್ಯನಿರ್ವಹಿಸುತ್ತಿದ್ದು ಇವರ ಮೊಬೈಲ್ 81239 15218 ಆಗಿರುತ್ತದೆ. 

 ಸಾರ್ವಜನಿಕರು ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಸಂಬಂಧಿ ಸಹಾಯ ಮತ್ತು ಮಾಹಿತಿಗಾಗಿ ಸಹಾಯಕ ಚುನಾವಣಾಧಿಕಾರಿಗಳನ್ನು ಅಥವಾ ಅವರ ಕಚೇರಿಯನ್ನು ಸಂಪರ್ಕಿಸಬಹುದು.

error: Content is protected !!