ಮಲೇಬೆನ್ನೂರು ಸಮೀಪದ ನಂದಿ ಗುಡಿ ಗ್ರಾಮದ ಶ್ರೀ ಬಸವೇಶ್ವರ ದೇವರ ರಥೋತ್ಸವ ಇಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.
ಇದಕ್ಕೂ ಮುನ್ನ ಬೆಳಿಗ್ಗೆ 8.30 ರಿಂದ ರುದ್ರ ಗುಗ್ಗಳ ಹಾಗೂ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವವು ಸಕಲ ವಾದ್ಯಗಳೊಂದಿಗೆ ನಡೆಯಲಿದೆ.
ಸಂಜೆ ದೊಡ್ಡ ಬಂಡಿ ಪ್ರದರ್ಶನ, ರಾತ್ರಿ 8 ಗಂಟೆಗೆ ಓಕುಳಿ ನಂತರ ಕಂಕಣ ವಿಸರ್ಜನೆ ಮಾಡಲಾಗುವುದು. ಬುಧವಾರ ಬೆಳಿಗ್ಗೆ 9 ಗಂಟೆಗೆ ಶ್ರೀ ಬಸವೇಶ್ವರ ಪಾಲಿಕೆ ಉತ್ಸವದೊಂದಿಗೆ ಬುಕ್ಕಿಟ್ಟಿನ ಸೇವೆ ಇರುತ್ತದೆ.