ನಗರದ ಸಹ್ಯಾದ್ರಿ ಚಿಟ್ಸ್ ಗೆ ರಾಜ್ಯ ಪ್ರಶಸ್ತಿ

ನಗರದ ಸಹ್ಯಾದ್ರಿ ಚಿಟ್ಸ್ ಗೆ ರಾಜ್ಯ ಪ್ರಶಸ್ತಿ

ದಾವಣಗೆರೆ, ಮಾ. 18- ನಗರದ ಸಹ್ಯಾದ್ರಿ ಚಿಟ್ಸ್ ಪ್ರೈವೇಟ್‌ ಲಿಮಿಟೆಡ್ ಕಂಪನಿಗೆ ಪ್ರೈಡ್‌ ಇಂಡಿಯಾ ಅವಾರ್ಡ್ಸ್ ಸಂಸ್ಥೆಯು ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಎಕ್ಸಲೆನ್ಸ್ ಬಿಸಿನೆಸ್ ಅವಾರ್ಡ್ಸ್ ನಲ್ಲಿ 2024ನೇ ಸಾಲಿನ ಮೋಸ್ಟ್ ಟ್ರಸ್ಟೆಡ್‌ ಚಿಟ್ ಫಂಡ್ ಕಂಪನಿ ಪ್ರಶಸ್ತಿ ನೀಡಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಟಿ.ಎಸ್. ಬದರಿನಾಥ್,  ಮಾರುಕಟ್ಟೆ ನಿರ್ದೇಶಕ ಶಿವರಾಜ್ ಉಡುಗಣಿ, ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ್ ಭಟ್, ನಿರ್ದೇಶಕರಾದ ಜಿ.ವಿಜಯಕುಮಾರ್, ಸುನಿಲ್ ಕುಮಾರ್, ರವಿ ಮುಲಾನಿ, ಮಧುಕರ್ ಶೆಟ್ಟಿ, ವೆಂಕಟೇಶ್ ಹೆಚ್.ಎಸ್., ದ್ವಾರಕನಾಥ್ ಬಾಬು, ಅನೂಪ್, ನಳಿನಿ, ಹಾಜರಿದ್ದರು.

error: Content is protected !!