ಹರಿಹರ, ಮಾ.17 – ನಗರದ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗಣದಲ್ಲಿ ಜಿಲ್ಲಾ ಮತ್ತು ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ 13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಡಗರ – ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.
ನಗರದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾಳೆ ದಿನಾಂಕ 18ರ ಸೋಮವಾರ ಬೆಳಗ್ಗೆ 8 ಗಂಟೆಗೆ ರಾಷ್ಟ್ರ ಧ್ವಜಾರೋಹಣ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್, ಪರಿಷತ್ತಿನ ಧ್ವಜಾರೋಹಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ, ನಾಡ ಧ್ವಜಾರೋಹಣ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್ ಮಾಡಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಗರದ ಶ್ರೀ ಹರಿಹರೇಶ್ವರ ದೇವಾಲಯದ ಮುಂಭಾಗ ದಿಂದ ಪ್ರಾರಂಭಗೊಳ್ಳಲಿದೆ. ಉದ್ಘಾಟನೆಯನ್ನು ಎಸ್ಪಿ ಉಮಾ ಪ್ರಶಾಂತ್ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಾಯಕ ನಿರ್ದೇಶಕ ಕೆ ರವಿಚಂದ್ರ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಜಿ. ಕರಿಸಿದ್ದಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಉಪನಿರ್ದೇಶಕ ಜೆ. ಕೊಟ್ರೇಶ್, ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಜಿ. ರವಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಬೆಳಗ್ಗೆ 10-30 ಕ್ಕೆ ಸಮ್ಮೇಳನದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ಶಾಸಕ ಬಿ.ಪಿ. ಹರೀಶ್ ವಹಿಸಲಿದ್ದಾರೆ.
ಸಮ್ಮೇಳನದ ಅಧ್ಯಕ್ಷತೆಯನ್ನು ಪ್ರೊ ಸಿ. ವಿ. ಪಾಟೀಲ್ ವಹಿಸುವರು. ಡಾ. ಹೆಚ್. ಗಿರಿಜಮ್ಮ ಮಹಾದ್ವಾರ ಉದ್ಘಾಟನೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ, ಹೆಳವನಕಟ್ಟೆ ಗಿರಿಯಮ್ಮ ಹಾಗೂ ಪ್ರೊ. ಬಿ. ಕೃಷ್ಣಪ್ಪ ವೇದಿಕೆ ಉದ್ಘಾಟನೆಯನ್ನು, ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ರಾಜ್ಯ ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ ಮಾಡಲಿದ್ದಾರೆ. ಸಮ್ಮೇಳನದ ಪ್ರಧಾನ ಭಾಷಣ ಬೆಂಗಳೂರಿನ ವಿಶ್ರಾಂತ ಕುಲಪತಿ ಪ್ರೊ ಮಲ್ಲೇಪುರಂ ಜಿ. ವೆಂಕಟೇಶ್ ಮಾಡಲಿದ್ದಾರೆ,
ಹರಿಹರೇಶ್ವರ ದೇವಸ್ಥಾನ ನಿರ್ಮಿತ ಮಂತ್ರಿ ಪೊಲಾಲ್ವಾ ದಂಡನಾಥ ಮತ್ತು ಮಿಠಾಯಿ ಡಿ. ಉಜ್ಜೇಶ್ ಸಭಾಂಗಣ ಉದ್ಘಾಟನೆಯನ್ನು ಶಾಸಕ ಡಿ.ಜಿ.ಶಾಂತನಗೌಡ್ರು, ಎ.ಆರ್. ಉಜ್ಜಿನಪ್ಪ, ಮಳಿಗೆಗಳ ಉದ್ಘಾಟನೆಯನ್ನು ಶಾಸಕ ಕೆ. ಬಸವಂತಪ್ಪ, ಚಿತ್ರಕಲಾ ಪ್ರದರ್ಶನ ಉದ್ಘಾಟನೆಯನ್ನು ಶಾಸಕ ಬಸವರಾಜ್ ಶಿವಗಂಗಾ ಹಾಗೂ ಸಂಗಮ ಸಿರಿ ಸ್ಮರಣ ಸಂಚಿಕೆ ಬಿಡುಗಡೆಯನ್ನು ಶಾಸಕ ಸಿ. ದೇವೇಂದ್ರಪ್ಪ ಮಾಡಲಿದ್ದಾರೆ.
ಕೃತಿಗಳ ಬಿಡುಗಡೆಯನ್ನು ಎಂ.ಎಲ್.ಸಿ.ಗಳಾದ ಅಬ್ದುಲ್ ಜಬ್ಬಾರ್, ಡಾ. ವೈ.ಎ. ನಾರಾಯಣಸ್ವಾಮಿ, ಮಾಜಿ ಶಾಸಕರಾದ ಹೆಚ್.ಎಸ್. ಶಿವಶಂಕರ್, ಎಸ್ ರಾಮಪ್ಪ ಮಾಡುವರು. ಮುಖ್ಯ ಅತಿಥಿಗಳಾಗಿ ಮಾಜಿ ಎಂ.ಎಲ್.ಸಿ ಮೋಹನ್ ಕುಮಾರ್ ಕೊಂಡಜ್ಜಿ, ಬಾಪೂಜಿ ಸಂಸ್ಥೆಯ ನಿರ್ದೇಶಕರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಎ.ಕೆ. ಫೌಂಡೇಶನ್ ಸಂಸ್ಥಾಪಕ ಕೆ.ಜೆ. ಕೊಟ್ರೇಶ್, ಇನ್ಸೈಟ್ ಸಂಸ್ಥಾಪಕ ಜಿ.ಬಿ. ವಿನಯಕುಮಾರ್, ಆರೈಕೆ ಆಸ್ಪತ್ರೆ ವೈದ್ಯ ಡಾ ಟಿ.ಜಿ. ರವಿಕುಮಾರ್, ತಾಪಂ ಇಓ ರಮೇಶ್ ಸುಲ್ಪಿ, ಬಿಇಓ ಹನುಮಂತಪ್ಪ, ಜಿಲ್ಲಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಡಿ ಕುಮಾರ್, ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಹೆಚ್.ಜಿ. ಲಿಂಗಯ್ಯ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ವೀರೇಶ್ ಎಸ್ ಒಡೇನಪುರ, ತಾಲ್ಲೂಕು ಅಧ್ಯಕ್ಷ ಎ.ಕೆ. ಭೂಮೇಶ್, ರಾಷ್ಟ್ರೀಯ ಗೋವು ಸಂಘದ ಅಧ್ಯಕ್ಷ ಡಾ ಜಿ.ಟಿ. ಸಿದ್ದಪ್ಪ, ಸ್ಮರಣ ಸಂಚಿಕೆ ಸಂಪಾದಕರ ನುಡಿ ಸಾಹಿತಿ, ಪ್ರೊ ಹೆಚ್.ಎ. ಭಿಕ್ಷಾವರ್ತಿಮಠ್, ಸಮ್ಮೇಳನಾಧ್ಯಕ್ಷರ ಪರಿಚಯ ಕಾರ್ಯದರ್ಶಿ ಬಿ.ಬಿ. ರೇವಣ್ಣನಾಯ್ಕ್, ಮಾಡಲಿದ್ದಾರೆ.
ಗೋಷ್ಟಿ-1. ಮಧ್ಯಾಹ್ನ 2 ಗಂಟೆಗೆ `ಶಿಕ್ಷಣ ಮತ್ತು ಕನ್ನಡ ಅಸ್ಮಿತೆ’ ಅಧ್ಯಕ್ಷತೆ ಶಿಕ್ಷಣ ತಜ್ಞ ಡಾ ಹೆಚ್.ಎ. ವಾಮದೇವಪ್ಪ, `ಕರ್ನಾಟಕ ಸುವರ್ಣ ಸಂಭ್ರಮದಲ್ಲಿ ನಾಡು, ನುಡಿ ಸಾಹಿತ್ಯಿಕ ಸಾಧನೆ’ ಬಗ್ಗೆ ಸಾಂಸ್ಕೃತಿಕ
ಚಿಂತಕ ಡಾ. ಹೆಚ್.ಬಿ. ಮಂಜುನಾಥ್
ಮಾತನಾಡಲಿದ್ದು, `ಕನ್ನಡ ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ’ ಸಾಹಿತಿ ಸೀತಾ ಎಸ್. ನಾರಾಯಣ, ಕನ್ನಡ ಶಾಲೆಗಳ ಸ್ಥಿತಿಗತಿ ಪರಿಹಾರ, ಹರಪನಹಳ್ಳಿ ಕಾಲೇಜು ಪ್ರಾಂಶುಪಾಲ ಹೆಚ್. ಮಲ್ಲಿಕಾರ್ಜುನ್ ವಿಷಯಗಳ ಮಂಡನೆ ಮಾಡಲಿದ್ದಾರೆ.
ಗೋಷ್ಠಿ -2. ಮಧ್ಯಾಹ್ನ 3-30 ಕ್ಕೆ `ಇತಿಹಾಸ, ಕೃಷಿ ಮತ್ತು ದಲಿತ ಚಳವಳಿ’ ಅಧ್ಯಕ್ಷತೆ ಹಿರಿಯ ವಿದ್ವಾಂಸ ಪ್ರೊ. ಹೆಚ್.ಎಸ್. ಹರಿಶಂಕರ್,` ರೈತರ ಸಮಸ್ಯೆಗಳು ಮತ್ತು ಪರಿಹಾರ’ ರೈತ ಸಂಘ ರಾಜ್ಯ ಅಧ್ಯಕ್ಷ ಹೆಚ್. ಆರ್. ಬಸವರಾಜಪ್ಪ, `ಪ್ರೊ. ಬಿ. ಕೃಷ್ಣಪ್ಪ ಮತ್ತು ದಲಿತ ಚಳವಳಿ’ ಸಾಂಸ್ಕೃತಿಕ ಚಿಂತಕ ಡಾ ಎ.ಬಿ. ರಾಮಚಂದ್ರಪ್ಪ ವಿಷಯಗಳ ಮಂಡನೆ ಮಾಡಲಿದ್ದಾರೆ.
ಮಧ್ಯಾಹ್ನ 4-30 ಕ್ಕೆ ಯುವ ಕವಿಗೋಷ್ಠಿ. ಅಧ್ಯಕ್ಷತೆ ಸಾಹಿತಿ ಎಸ್. ಸಿದ್ದೇಶ್ ಕುರ್ಕಿ, ಆಶಯ ನುಡಿ ಸಾಹಿತಿ ಕಮಲಾಪುರ ಕೆ ಪಂಚಾಕ್ಷರಿ, ಸಂಜೆ 6-30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, ಕಿರುತೆರೆ ನಟ ಡಾ. ರಾಧಾಕೃಷ್ಣ ಪಲ್ಲಕಿ, ಅಧ್ಯಕ್ಷತೆ ಸಾಹಿತಿ ಹೆಚ್.ಕೆ. ಕೊಟ್ರಪ್ಪ.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ ಗೌರವ ಕಾರ್ಯದರ್ಶಿಗಳಾದ ಎಂ. ಚಿದಾನಂದ ಕಂಚಿಕೇರಿ, ಬಿ.ಬಿ. ರೇವಣ್ಣನಾಯ್ಕ್, ಖಜಾಂಚಿ ವಿಜಯ ಮಹಾಂತೇಶ್ ಇತರರು ಹಾಜರಿದ್ದರು.