ನಗರದಲ್ಲಿ ಇಂದು ಹಾಟ್ ಏರ್ ಬಲೂನ್ ಸಾಹಸ ಕ್ರೀಡೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಹೈಸ್ಕೂಲ್ ಮೈದಾನದಲ್ಲಿ ಮತದಾರರ ಜಾಗೃತಿ ಅರಿವು ಕಾರ್ಯಕ್ರಮದ ಅಂಗವಾಗಿ ಹಾಟ್ ಏರ್ ಬಲೂನ್ ಸಾಹಸ ಕ್ರೀಡೆಯನ್ನು ಇಂದು ಮತ್ತು ನಾಳೆ ಆಯೋಜಿಸಲಾಗಿದೆ. 18 ರಿಂದ 29 ವರ್ಷ ವಯೋಮಾನದ ಯುವಕ ಮತ್ತು ಯುವತಿಯರು ಭಾಗವಹಿಸಲು ಅವಕಾಶ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೆೀರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ದೂ ಸಂ: 08192-237480 ಸಂಪರ್ಕಿಸಲು ಇಲಾಖೆ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿಬಾಯಿ ತಿಳಿಸಿದ್ದಾರೆ.

error: Content is protected !!