ಯರವನಾಗ್ತಿಹಳ್ಳಿ ಕ್ಯಾಂಪ್ : ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವ

ಯರವನಾಗ್ತಿಹಳ್ಳಿ ಕ್ಯಾಂಪ್ : ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಬ್ರಹ್ಮೋತ್ಸವ

ಲೋಕಿಕೆರೆ ರಸ್ತೆ, ಯರವ ನಾಗ್ತಿಹಳ್ಳಿ ಕ್ಯಾಂಪ್‌ನ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ದ್ವಾದಶ (12ನೇ) ವಾರ್ಷಿಕ ಬ್ರಹ್ಮೋತ್ಸವ, ಅಷ್ಟಬಂಧನ, ಮಹಾಸಂಪ್ರೋ ಕ್ಷಣ, ಪುಷ್ಕರೋತ್ಸವ ಕಾರ್ಯಕ್ರಮದ ಪ್ರಯುಕ್ತ ಇಂದು ಬೆಳಿಗ್ಗೆ ವಿಷ್ವಕ್ಸೇನ ಪೂಜೆ, ಪುಣ್ಯಾಹ ವಾಚನೆ, ಮಹಾಶಾಂತಿ ಹವನ, ಸಂತಾನ ಪ್ರಾಪ್ತಿಗಾಗಿ ಪುತ್ರ ಕಾಮೇಷ್ಠಿ ಹವನ, ಸ್ವಾಮಿಯವರಿಗೆ ಸ್ನಪನ, ಅಲಂ ಕರಣ, ನಿರಾಂಜನ ಮಂತ್ರಪುಷ್ಪಗಳು, ಸಂಜೆ 4 ಕ್ಕೆ ಶ್ರೀ ಭೂ ಸಮೇತ ಶ್ರೀ ವೆಂಕಟೇಶ್ವರ ಸ್ವಾಮಿಯವರ  ಗ್ರಾಮೋತ್ಸವ ವನ್ನು ಗ್ರಾಮದ ರಾಜ ಬೀದಿಗಳಲ್ಲಿ ತಾಳ-ಮೇಳಗಳ ಸಮೇತ ನಡೆಸಲಾಗುವುದು. ಸಂಜೆ 6 ಕ್ಕೆ ಶ್ರೀ ಭೂಸಮೇತ ಶ್ರೀ ವೆಂಕೇಟಶ್ವರಸ್ವಾಮಿಯವರ ದಿವ್ಯ ತಿರು ಕಲ್ಯಾಣ ಮಹೋತ್ಸವವನ್ನು ಸಾಮೂಹಿಕ ವಾಗಿ ದಂಪತಿಗಳು ಕುಳಿತು ಪೂಜೆ ನೆರವೇರಿಸುವರು. 

ದಿನಾಂಕ 15ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ವಿಷ್ವಕ್ಸೇನ ಪೂಜೆ, ಪುಣ್ಯಾಹ ವಾಚನೆ, ಮಹಾಶಾಂತಿ ಹವನ, ಅಷ್ಟಬಂಧನ, ಅಭಿಮಂತ್ರಣ, ನೀರಾಂಜನ ಮಂತ್ರ ಪುಷ್ಪ, ಸಂಜೆ 5 ಗಂಟೆಗೆ ವಿಷ್ವಕ್ಸೇನ ಪೂಜೆ, ಪುಣ್ಯಾಹ ವಾಚನೆ, ಮುತ್ತೈದೆಯರಿಗೆ ಸಾಮೂಹಿಕ ಕುಂಕು ಮಾರ್ಚನೆ, ನೀರಾಂಜನ ಮಂತ್ರಪುಷ್ಪ ನೆರವೇರುವುದು.

ದಿನಾಂಕ 16ರ ಶನಿವಾರ ಬೆಳಿಗ್ಗೆ 9 ಗಂಟೆಗೆ ವಿಷ್ವಕ್ಸೇನ ಪೂಜೆ, ಪುಣ್ಯಾಹ ವಾಚನೆ, ಅಷ್ಟಬಂಧನ ಮಹಾ ಪೂರ್ಣಾಹುತಿ, ಮಹಾಕುಂಭಾ ಭಿಷೇಕ, ಕಳನ್ಯಾಸ, ಗೋದರ್ಶನ, ಸುದರ್ಶನ ಮೂ ರ್ತಿಗೆ ಶ್ರೀ ಭೂ ಸಮೇತ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಗೆ ಉತ್ಸ ವಾಂತ ಸ್ನಪನಂ, ಚಕ್ರಸ್ನಾನ, ನೀರಾಂಜನ ಮಂತ್ಪರುಷ್ಪ, ಸಂಜೆ 5 ಕ್ಕೆ ವಿಷ್ವಕ್ಸೇನ ಪೂಜೆ, ಪುಣ್ಯಾಹ ವಾಚನೆ, ದ್ವಾದಶ ಪ್ರದಕ್ಷಿಣೆಗಳು, ಶ್ರೀ ಪುಷ್ಪ ಯಾಗೋತ್ಸವ (ಗ್ರಾಮಾಭಿವೃದ್ಧಿ) ಪೂಜೆಗಳು ನೆರವೇರಲಿವೆ. ಈ ಎಲ್ಲಾ ಬೆಳಿಗ್ಗೆ ಹಾಗೂ ಸಂಜೆಯ ಪೂಜೆಯ ನಂತರ ಪ್ರಸಾದ ವಿತರಣೆ ನಡೆಯಲಿದೆ.

error: Content is protected !!