ನಗರದ ಎಂ.ಎಂ. ಶಿಕ್ಷಣ ವಿದ್ಯಾಲಯದಲ್ಲಿ ಇಂದು ತಾಲ್ಲೂಕು ಕಸಾಪ ದತ್ತಿ ಉಪನ್ಯಾಸ

ನಗರದ ಎಂ.ಎಂ. ಶಿಕ್ಷಣ ವಿದ್ಯಾಲಯದಲ್ಲಿ ಇಂದು ತಾಲ್ಲೂಕು ಕಸಾಪ ದತ್ತಿ ಉಪನ್ಯಾಸ

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ನಾಗರಿಕರ ಸಹಾಯವಾಣಿ ಇವರ ಸಹಯೋಗದಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಶಾಲಾ – ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕೆ.ಟಿ. ನಾಗರಾಜ ನಾಯ್ಕ ಅಧ್ಯಕ್ಷತೆ ವಹಿಸುವರು. ಎಸ್.ಎಂ.ಬಿ. ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಅನಿತಾ ದೊಡ್ಡಗೌಡ್ರು ಅವರು ವಚನ ಚಳುವಳಿಯಲ್ಲಿ ಮಹಿಳಾ ಅಸ್ಮಿತೆ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. 

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಸಂಯೋಜಕ ನವೀನ್ ಕುಮಾರ್ ಅವರು ಉಪಸ್ಥಿತರಿರುವರು. ತಾಲ್ಲೂಕು ಕಸಾಪ ನಿರ್ದೇಶಕ ಷಡಾಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಶ್ರೀಮತಿ ಸರ್ವಮಂಗಳಮ್ಮ ಮಹಾಶರಣ ಮಾಗನೂರು ಬಸಪ್ಪ ದತ್ತಿಯನ್ನು ದತ್ತಿ ದಾನಿಗಳಾದ ಶ್ರೀಮತಿ ಸುನಂದಾದೇವಿ ಎಂ.ಬಿ. ಸಂಗಮೇಶ್ವರಗೌಡ್ರ, ಶರಣ ಮಾಗನೂರು ರಾಜಶೇಖರಗೌಡ್ರು ದತ್ತಿಯನ್ನು ದತ್ತಿ ದಾನಿಗಳಾದ ಶ್ರೀಮತಿ ಸುಲೋಚನಮ್ಮ ಮಾಗನೂರು ರಾಜಶೇಖರಗೌಡರು ಮತ್ತು  ಸಿದ್ದನಮಠ ದಿ. ನಾಡಿಗೇರ ಬಸಪ್ಪ ಶ್ರೀಮತಿ ಕಮಲಮ್ಮ ದತ್ತಿಯನ್ನು ನಿವೃತ್ತ ಪ್ರಾಚಾರ್ಯ ಎಸ್.ಬಿ. ರಂಗನಾಥ ಅವರು ನಡೆಸಿಕೊಡುವರು.

error: Content is protected !!