ನೀಲಾನಹಳ್ಳಿಯಲ್ಲಿ ನಾಳೆ ಶ್ರೀ ಆಂಜನೇಯ ರಥೋತ್ಸವ, ಕಾರಣಿಕ

ನೀಲಾನಹಳ್ಳಿಯಲ್ಲಿ ನಾಳೆ ಶ್ರೀ ಆಂಜನೇಯ ರಥೋತ್ಸವ, ಕಾರಣಿಕ

ದಾವಣಗೆರೆ ತಾಲ್ಲೂಕಿನ ನೀಲಾನಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಕಾರಣಿಕವು ನಾಳೆ ಶುಕ್ರವಾರ ನಡೆಯಲಿದೆ ಎಂದು ದೇವಸ್ಥಾನದ ಕನ್ವೀನರ್ ಎನ್.ಎಂ. ಆಂಜನೇಯ ಗುರೂಜಿ ತಿಳಿಸಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಇಂದು ಸಂಜೆ ದೊಡ್ಡಬಾತಿಯ ಶ್ರೀ ಬೀರಲಿಂಗೇಶ್ವರ ದೇವರು ಆಗಮಿಸುವರು ಹಾಗೂ ರಾತ್ರಿ ಅರಿಶಿಣ ಎಣ್ಣೆ ಕಾರ್ಯ ನಡೆಯುವುದು. ನಾಳೆ ಶುಕ್ರವಾರ ಬೆಳಿಗ್ಗೆ 8.30ಕ್ಕೆ ರಥೋತ್ಸವ ನಡೆಯಲಿದೆ. ಬೆಳಿಗ್ಗೆ 9.30 ರಿಂದ 1.30ರವರೆಗೆ ಭಕ್ತಾದಿಗಳು ಹರಕೆ ತೀರಿಸುವ ಕಾರ್ಯಕ್ರಮ ನಡೆಯಲಿದೆ. ಸಂಜೆ 4.30ಕ್ಕೆ ಬೇಟೆ ಆಡುವುದು, ನಂತರ 5.30ಕ್ಕೆ ಮುಳ್ಳುಗದ್ದುಗೆ ಏರುವುದು, 6.30ಕ್ಕೆ ಕಾರಣಿಕ ಮತ್ತು 7.30ಕ್ಕೆ ಭೂತ ಸೇವೆ, ನಂತರ 8.30ಕ್ಕೆ ಓಕಳಿ ಕಾರ್ಯ, 9.30ಕ್ಕೆ ಗಂಗಾ ಪೂಜೆಯೊಂದಿಗೆ ರಥೋತ್ಸವ ಪೂರ್ಣಗೊಳ್ಳಲಿದೆ.

error: Content is protected !!