ನಗರದಲ್ಲಿ ಇಂದು ಗೌರವ ಸಮರ್ಪಣೆ

ಎಂಸಿಸಿ `ಬಿ’ ಬ್ಲಾಕ್‌ನ ಸ್ನೇಹ ಮಹಿಳಾ ಬಳಗದ ವತಿಯಿಂದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇಂದು ಸಂಜೆ 5 ಗಂಟೆಗೆ  ಡಾ. ಸದ್ಯೋ ಜಾತ ಶಿವಾಚಾರ್ಯ ಹಿರೇಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಕೂಲಿ ಕೆಲಸ ಮಾಡಿ ಮಕ್ಕಳನ್ನು ಡಾಕ್ಟರ್ ಹಾಗೂ ಇಂಜಿನಿಯರ್ ಮಾಡಿರುವ ಅನ್ನಪೂರ್ಣ ಎಂಬ ಮಹಿಳೆಗೆ ಹಾಗೂ ಕುಟುಂಬ ನಿರ್ವಹಣೆಗೆ ಬೋಂಡಾ ಮಾಡಿ ಮಕ್ಕಳನ್ನು ಹಾಗೂ ಕುಟುಂಬವನ್ನು ಉತ್ತಮ ಸ್ಥಿತಿಗೆ ತಂದಿರುವ ಮಹಿಳೆಗೆ ಗೌರವ ಸಮರ್ಪಣೆ ಹಾಗೂ ಮಹಿಳೆ ಯರಿಗೆ ಅನೇಕ ರೀತಿಯ ರಚನಾತ್ಮಕ ಆಟಗಳನ್ನು ಏರ್ಪಡಿಸಲಾಗಿದೆ.

ವಾಸವಿ ಮಹಿಳಾ ಸಮಾಜದ ಗೌರವಾಧ್ಯಕ್ಷರಾದ ಹೇಮಾ ಶ್ರೀನಿವಾಸ್ ಅತಿಥಿಯಾಗಿ ಉಪಸ್ಥಿತರಿದ್ದು, ಸಮಾಜದಲ್ಲಿ ಮಹಿಳೆಯರ ಪಾತ್ರಗಳು ಎಂಬ ವಿಷಯದ ಬಗ್ಗೆ ಮಾತನಾಡುವರು ಎಂದು ಬಳಗದ ಗೌರವ ಅಧ್ಯಕ್ಷರಾದ ಮಂಜುಳಾ ಬಸವಲಿಂಗಪ್ಪ ತಿಳಿಸಿದ್ದಾರೆ.

error: Content is protected !!