ದಾವಣಗೆರೆ ತಾಲ್ಲೂಕಿನ ನೀಲಾನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವ ಹಾಗೂ ಕಾರಣಿಕವು ಇದೇ ದಿನಾಂಕ 15 ರಂದು ನಡೆಯಲಿದೆ ಎಂದು ಶ್ರೀ ಆಂಜನೇಯ ಸ್ವಾಮಿ ಸೇವಾ ಸಮಿತಿ ತಿಳಿಸಿದೆ.
ಇಂದು ರಾತ್ರಿ 9.10ಕ್ಕೆ ಕಂಕಣಧಾರಣೆ. ನಾಳೆ ಗುರುವಾರ ಸಂಜೆ ದೊಡ್ಡಬಾತಿಯ ಶ್ರೀ ಬೀರಲಿಂಗೇಶ್ವರ ದೇವರು ಆಗಮಿಸುವುದು. ಅಂದು ರಾತ್ರಿ ಅರಿಶಿಣ, ಎಣ್ಣೆ ಕಾರ್ಯ ನಡೆಯುವುದು. ದಿನಾಂಕ 15 ರಂದು ಬೆಳಿಗ್ಗೆ 8-30ಕ್ಕೆ ರಥೋತ್ಸವ ನಡೆಯಲಿದೆ.
ಬೆಳಿಗ್ಗೆ 9-30 ರಿಂದ ಮಧ್ಯಾಹ್ನ 1-30 ರವರೆಗೆ ಭಕ್ತಾದಿಗಳು ಹರಕೆ ತೀರಿಸುವುದು. ಸಂಜೆ 4-30ಕ್ಕೆ ಬೇಟೆ ಆಡುವುದು. ನಂತರ 5-30ಕ್ಕೆ ಮುಳ್ಳುಗದ್ದಿಗೆ ಏರುವುದು. ಸಂಜೆ 6-30ಕ್ಕೆ ಕಾರಣಿಕ ನುಡಿಯುವುದು.
ರಾತ್ರಿ 7-30ಕ್ಕೆ ಭೂತ ಸೇವೆ, ನಂತರ 8-30ಕ್ಕೆ ಓಕಳಿ ಕಾರ್ಯ
ಹಾಗೂ 9-30ಕ್ಕೆ ಗಂಗೆ ಪೂಜೆ ನೆರವೇರುವುದು ಎಂದು ಕನ್ವಿನೀಯರ್
ಎನ್. ಎಂ. ಆಂಜನೇಯ ಗುರೂಜಿ ತಿಳಿಸಿದ್ದಾರೆ.