ದುರ್ಗಾಂಭಿಕಾ ದೇವಿ ಜಾತ್ರೆ, ಭಕ್ತಾದಿಗಳಿಗೆ ಶೌಚಾಲಯದ ವ್ಯವಸ್ಥೆ

ದಾವಣಗೆರೆ, ಮಾ. 12 – ನಗರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ದುರ್ಗಾಂಬಿಕಾ ದೇವಿ ಜಾತ್ರೆಯ ಪ್ರಯುಕ್ತ ದೇವಾಲಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಇದೇ ದಿನಾಂಕ 18 ರಿಂದ 21 ರವರೆಗೆ ವಿರಕ್ತ ಮಠ, ದೊಡ್ಡಪೇಟೆ, ನಗರ ಕುಟುಂಬ ಕಲ್ಯಾಣ ಕೇಂದ್ರ-1, ದೊಡ್ಡಪೇಟೆ, ಎಸ್.ವಿ.ಎಸ್ ಶಾಲೆ, ಎಸ್.ಕೆ.ಪಿ. ರಸ್ತೆ, ಕನ್ನಿಕಾ ಪರಮೇಶ್ವರಿ ದೇವಸ್ಥಾನ ಸಂಘ (ರಿ), # 708, ಎಸ್.ಕೆ.ಪಿ. ದೇವಸ್ಥಾನದ ರಸ್ತೆ , ಮಾಕೇರ್ಂಡೇಶ್ವರ ಕಲ್ಯಾಣ ಮಂಟಪ, ಎಸ್.ಕೆ.ಪಿ. ರಸ್ತೆ, ನಾಮದೇವ ಸಿಂಪಿ ಕಲ್ಯಾಣ ಮಂಟಪ, ದೊಡ್ಡಪೇಟೆ ಇಲ್ಲಿನ ಶೌಚಾಲಯಗಳನ್ನು ಉಪಯೋಗಿಸುವ ಮೂಲಕ ದೇವಾಲಯದ ಸುತ್ತಮುತ್ತಲಿನ ಆವರಣವನ್ನು ಸ್ವಚ್ಚವಾಗಿರಿಸಲು ಸಹಕರಿಸುವಂತೆ ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

error: Content is protected !!