ದಾವಣಗೆರೆ, ಮಾ. 12- ನಗರ ದೇವತೆ ಶ್ರೀ ದುರ್ಗಾಬಿಕ ಜಾತ್ರೆ ಅಂಗವಾಗಿ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಎಸ್.ಎಸ್.ಆಸ್ಪತ್ರೆ ದಾವಣಗೆರೆ ಇವರಿಂದ ಸಾಮಾನ್ಯ ಮತ್ತು ಬಡ ಜನರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಇಂದಿನಿಂದ ಆರಂಭಗೊಂಡಿದ್ದು, ಇದೇ ದಿನಾಂಕ 30ರ ಶನಿವಾರದವರೆಗೆ ನಡೆಯಲಿದೆ.
ಹೊರ ರೋಗಿಗಳ ಸಮಾಲೋಚನೆ, ದಾಖಲಾತಿ ಉಚಿತ, ವಾರ್ಡ್ ಬಾಡಿಗೆ, ನರ್ಸಿಂಗ್ ಚಾರ್ಜ್, ರಕ್ತ ಪರೀಕ್ಷೆ – ಸಿಬಿಸಿ, ಆರ್ಬಿಎಸ್, ಆರ್ಎಫ್ಟಿ, ಮೂತ್ರ ಪರೀಕ್ಷೆ, ಇಸಿಜಿ, ಇಕೋಕಾರ್ಡಿಯಗ್ರಫಿ, ಟಿಎಂಟಿ, ಕ್ಷ-ಕಿರಣ ಪರೀಕ್ಷೆ – ಎಕ್ಸರೇ, ಯುಎಸ್ಜಿ ಅಬ್ಡಮೆನ್,ಯುಎಸ್ಜಿ ಪೆಲ್ವಿಸ್ ಹಾಗೂ ಎಲ್ಲಾ ಹೋರ ರೋಗಿ ಸೇವೆಗಳಲ್ಲಿ ಶೇ. 50 ರಷ್ಟು ವಿನಾಯಿತಿ ಇದ್ದು, ಉಪಭೋಗ್ಯ ವಸ್ತುಗಳನ್ನು ಹೊರತುಪಡಿಸಿ ಔಷಧಗಳಿಗೆ ಯಾವುದೇ ತರಹದ ರಿಯಾಯಿತಿಗಳು ಇರುವುದಿಲ್ಲ ಎಂದು ವೈದ್ಯಕೀಯ ನಿರ್ದೇಶಕರು ತಿಳಿಸಿದ್ದಾರೆ.