ಮಲೇಬೆನ್ನೂರು, ಮಾ.11- ಕಳೆದ ಜನವರಿ ತಿಂಗಳಲ್ಲಿ ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ನಡೆಸುವ ಗಣಕಯಂತ್ರ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಪಟ್ಟಣದ ಈಶ್ವರ್ ಗಣಕಯಂತ್ರ ಶಾಲೆಗೆ ಶೇ 87.5ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ತೆಗೆದುಕೊಂಡಿದ್ದ 48 ವಿದ್ಯಾರ್ಥಿಗಳ ಪೈಕಿ 42 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 2 ಅತ್ಯುನ್ನತ, 6 ಪ್ರಥಮ, 14 ದ್ವಿತೀಯ ಹಾಗೂ 20 ತೃತೀಯ ಸ್ಥಾನ ಪಡೆದು ತೇರ್ಗಡೆಹೊಂದಿದ್ದಾರೆ ಎಂದು ಶಾಲೆ ಪ್ರಾಂಶುಪಾಲರಾದ ಬಿ.ಎನ್. ಅಂಬಿಕಾ ತಿಳಿಸಿದ್ದಾರೆ.
February 1, 2025