ವಿನೂತನ ಸ್ತ್ರೀ ಸೂಪರ್ ಜೋಡಿಗಳು

ದಾವಣಗೆರೆ, ಮಾ. 10- ನಗರದ ವಿನೂತನ ಮಹಿಳಾ ಸಮಾಜದ ವತಿಯಿಂದ  ನಾಡಿದ್ದು ದಿನಾಂಕ 12ರ  ಬೆಳಿಗ್ಗೆ 11 ಗಂಟೆಗೆ ವಿನಾಯಕ ದೇವಸ್ಥಾನದ ಆವರಣದಲ್ಲಿ `ವಿನೂತನ ಸ್ತ್ರೀ ಸೂಪರ್ ಜೋಡಿಗಳು’ ಸ್ಪರ್ಧೆ  ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷರಾದ ರೇಖಾ ಓಂಕಾರಪ್ಪ ತಿಳಿಸಿದ್ದಾರೆ. 

50 ವರ್ಷದ ಒಳಗಿನವರಿಗೆ ಹಾಗೂ  ಮೇಲ್ಪಟ್ಟವರಿಗೆ ಎಂದು ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಒಂದು ತಂಡದಲ್ಲಿ ಇಬ್ಬರಿರಬೇಕು.   200 ರೂ. ಶುಲ್ಕದೊಂದಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ಸ್ಪರ್ಧೆ ನಾಲ್ಕು ಹಂತದಲ್ಲಿರುತ್ತದೆ.   1) ಬೆಂಕಿ ರಹಿತ ನ್ಯೂಟ್ರೀಷಿಯನ್ ಸಹಿತ ಆಹಾರ. 2) ಕ್ವಿಜ್ (ಸಾಮಾನ್ಯ ಜ್ಞಾನ, ಸ್ಪೋರ್ಟ್ಸ್, ರಾಮಾಯಣ, ಮಹಾಭಾರತ, ಅಧ್ಯಾತ್ಮಿಕ, ಪರಿಸರ).  3) ಒಂದು ನಿಮಿಷದ ಆಟ 4) ಜಾನಪದ ನೃತ್ಯ.   ವಿವರಕ್ಕೆ ಸಂಪರ್ಕಿಸಿ : 96638 23664, 98861 77445.  

error: Content is protected !!