ನಗರದ ಬಿಐಇಟಿಯಲ್ಲಿ ಇಂದು

ಬಾಪೂಜಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಹಾಗೂ ವಿದ್ಯಾರ್ಥಿಗಳ ವೆಲ್ಫೇರ್ ಕೌನ್ಸಿಲ್ ಮತ್ತು ವಿದ್ಯಾರ್ಥಿಗಳ ಸೃಜನಶೀಲತೆ ಕ್ಲಬ್ ವತಿಯಿಂದ ನಮ್ಮ ಎತ್ನಿಕ್-2024 ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ 9:30 ಕ್ಕೆ ಬಿಐಇಟಿ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯ ಮಂಜುನಾಥ ಗಡಿಗುಡಾಳ್, ನಟಿ ಧನ್ಯ ರಾಮ್ ಕುಮಾರ್ ಭಾಗವಹಿಸಲಿದ್ದು, ಗೌರವ ಅತಿಥಿಯಾಗಿ ಬಿಐಇಟಿ ನಿರ್ದೇಶಕ ಪ್ರೊ.ವೈ.ವೃಷಬೇಂದ್ರಪ್ಪ ಪಾಲ್ಗೊಳ್ಳುವರು. ಕಾಲೇಜು ಪ್ರಾಂಶುಪಾಲ ಡಾ. ಎಚ್.ಬಿ. ಅರವಿಂದ್ ಅಧ್ಯಕ್ಷತೆ ವಹಿಸುವರು.

error: Content is protected !!