ವಿಠಲ ರುಖುಮಾಯಿ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆಯ 46ನೇ ವಾರ್ಷಿಕೋತ್ಸವ

ವಿಠಲ ರುಖುಮಾಯಿ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆಯ 46ನೇ ವಾರ್ಷಿಕೋತ್ಸವ

ದಾವಣಗೆರೆಯ ಶ್ರೀ ಭಾವಸಾರ ಕ್ಷತ್ರಿಯ ದೈವ ಮಂಡಳಿ (ರಿ.ನಂ.7) ಯ ಭಜನಾ ಮಂಡಳಿ ವತಿಯಿಂದ ಮಹಾರಾಜ ಪೇಟೆಯ ಶ್ರೀ ವಿಟ್ಠಲ ಮಂದಿರದಲ್ಲಿ ಶ್ರೀ ವಿಠಲ ರುಖುಮಾಯಿ ಶಿಲಾ ಮೂರ್ತಿಗಳ ಪ್ರತಿಷ್ಠಾಪನೆಯ 46ನೇ ವಾರ್ಷಿಕೋತ್ಸವ ಕಾರ್ಯಕ್ರಮ ಆರಂಭವಾಗಿದೆ.

ಇದೇ ಸಂದರ್ಭದಲ್ಲಿ ಶಿವರಾತ್ರಿ ಮಹೋತ್ಸವ ಮತ್ತು ಶ್ರೀ ಗೀತ ಜ್ಞಾನೇಶ್ವರಿ ಗ್ರಂಥ ಪಾರಾಯಣ ಸಪ್ತಾಹ ಕೂಡಾ ಏರ್ಪಾಡಾಗಿದೆ ಎಂದು ದೈವ ಮಂಡಳಿ ಅಧ್ಯಕ್ಷ ಎಂ.ಎನ್. ರಘು ಮುಸಳೆ ತಿಳಿಸಿದ್ದಾರೆ. ಈ ಕಾರ್ಯಕ್ರಮ ಗಳು ಈಗಾಗಲೇ  ಆರಂಭವಾಗಿದ್ದು,  ನಾಡಿದ್ದು ದಿನಾಂಕ 9 ರವರೆಗೆ ಜರುಗಲಿದೆ. 

ಪ್ರತಿದಿನ ಮುಂಜಾನೆ 5.30ಕ್ಕೆ ಕಾಕಡಾರತಿ, ಭಜನೆ, ಬೆಳಿಗ್ಗೆ 7ಕ್ಕೆ ಶ್ರೀ ಜ್ಞಾನೇಶ್ವರಿ ಸಾಮೂಹಿಕ ಪಾರಾಯಣ, ಬೆಳಿಗ್ಗೆ 9ಕ್ಕೆ ನಾಮಜಪ, ರಾತ್ರಿ 8.30ಕ್ಕೆ ದುರ್ಗಾ ಮಹಿಳಾ ಮಂಡಳಿಯಿಂದ ನೃತ್ಯ, ರಾತ್ರಿ 10ಕ್ಕೆ ಹ.ಭ.ಪ. ಮನು ಮಹಾರಾಜ್ ಶಿವೂರಕರ್ ಪಂಡರಾಪುರ ಇವರಿಂದ ಕೀರ್ತನೆ ಆಯೋಜನೆ ಗೊಂಡಿದೆ. 

ಇಂದು ಶಿವರಾತ್ರಿಯ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 5ಕ್ಕೆ ರುಖುಮಾಯಿ ಮಹಿಳಾ ಮಂಡಳಿಯಿಂದ ಭಜನೆ, ಸಂಜೆ 6ಕ್ಕೆ ಕಲಾವತಿ ಮಹಿಳಾ ಮಂಡಳಿಯಿಂದ ಶಿವನಾಮ ಸ್ತೋತ್ರ,
ರಾತ್ರಿ 8ಕ್ಕೆ ತರುಣಾ ಮಂಡಳ ಯೋಗ
ಕೇಂದ್ರದಿಂದ ಮಕ್ಕಳ ಮನೋರಂಜನೆಯ ಕಾರ್ಯಕ್ರಮಗಳು ಜರುಗಲಿವೆ.

ನಾಳೆ ಶನಿವಾರ ಬೆಳಿಗ್ಗೆ 8ಕ್ಕೆ ಜ್ಞಾನೇಶ್ವರಿ ಪಾರಾಯಣ ಮುಕ್ತಾಯ ಸಮಾರಂಭ, ಬೆಳಿಗ್ಗೆ 9.30ಕ್ಕೆ ಶ್ರೀ ವಿಠಲ ರುಕ್ಮಾಯಿ ದೇವರ ರಥೋತ್ಸವ, ಮಹಿಳಾ ಮಂಡಳಿಯಿಂದ ಕುಂಭಾಭಿಷೇಕ, ಭಜನೆಯೊಂದಿಗೆ ರಾಜಬೀದಿಗಳಲ್ಲಿ ಉತ್ಸವ ನಡೆಯಲಿದೆ.

ಮಧ್ಯಾಹ್ನ 1ಕ್ಕೆ ಶ್ರೀ ಸಂತ ಪೂಜೆ, ಮಧ್ಯಾಹ್ನ 1.15ಕ್ಕೆ ವಿಶೇಷ ಪಾವುಲ ಭಜನೆ, ಮಧ್ಯಾಹ್ನ 2ಕ್ಕೆ ಶ್ರೀ ಸಂತ ಸಮಾರಾಧನೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ.

error: Content is protected !!