ದಾವಣಗೆರೆ, ಮಾ. 7- ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಶಿವರಾತ್ರಿ ಅಮಾವಾಸ್ಯೆ ಪ್ರಯುಕ್ತ ದಿನಾಂಕ 10ರ ಭಾನುವಾರ ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂಕಾರ ನಡೆಯುವುದು. ನಂತರ ಮಧ್ಯಾಹ್ನ 12.30ಕ್ಕೆ ಸರ್ವ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿದೆ. ಬೇತೂರು ಬಸವರಾಜಪ್ಪ ಮತ್ತು ಮಕ್ಕಳು, ಬೇತೂರು ಶಕುಂತಲಮ್ಮ ಮುರುಗೇಶಪ್ಪ ಮತ್ತು ಮಕ್ಕಳು, ಶ್ರೀಮತಿ ಸೌಭಾಗ್ಯ ಜಿ.ಎಂ. ಮೋಹನ ಮತ್ತು ಮಕ್ಕಳು, ಶ್ರೀಮತಿ ವೀಣಾ ಎಸ್.ಕೆ. ರವಿ ಮತ್ತು ಮಕ್ಕಳು, ಮೊಮ್ಮಕ್ಕಳು, ದಾವಣಗೆರೆ ಇವರು ದಾಸೋಹದ ಸೇವಾರ್ಥಿಗಳಾಗಿದ್ದಾರೆ.
March 3, 2025