ದಾವಣಗೆರೆ, ಮಾ.7- ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಹೆಚ್. ಟಾಟಾಶಿವನ್ ಇವರನ್ನು ದಾವಣಗೆರೆ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಖಾಲಿ ಇರುವ ಪ್ರಧಾನ ವ್ಯವಸ್ಥಾಪಕರು (ತಾಂತ್ರಿಕ) ಹುದ್ದೆಗೆ ಹೆಚ್ಚುವರಿಯಾಗಿ ಪ್ರಭಾರಿಯನ್ನಾಗಿ ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಅವರು ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ನಿರ್ದೇಶನದ ಮೇರೆಗೆ ನಿಯೋಜಿಸಿದ್ದಾರೆ. ಟಾಟಾಶಿವನ್ ಅವರು ಇಂದು ಹೆಚ್ಚುವರಿ ಪ್ರಭಾರಿ ಹುದ್ದೆಯ ಅಧಿಕಾರ ವಹಿಸಿಕೊಂಡಿದ್ದಾರೆ.
ಸ್ಮಾರ್ಟ್ ಸಿಟಿ ಪ್ರಭಾರ ವ್ಯವಸ್ಥಾಪಕರಾಗಿ (ತಾಂತ್ರಿಕ) ಹೆಚ್. ಟಾಟಾಶಿವನ್
