ಮಹಾ ಶಿವರಾತ್ರಿಯ ಪ್ರಯುಕ್ತ ಪಿ.ಜೆ. ಬಡಾವಣೆಯಲ್ಲಿರುವ ಶ್ರೀ ಸತ್ಯಸಾಯಿ ಮಂದಿರ ( ಸತ್ಯಂ-ಶಿವಂ-ಸುಂದರಂ) ದಲ್ಲಿ ಇಂದು ಬೆಳಗ್ಗೆ 5.15 ರಿಂದ, ನಾಳೆ ಶನಿವಾರ ಬೆಳಿಗ್ಗೆ 6 ರವರೆಗೆ ವಿವಿಧ ಧಾರ್ಮಿಕ ಸಾಧನೆಗಳು ನಡೆಯಲಿವೆ. ಬೆಳಿಗ್ಗೆ 5.15ಕ್ಕೆ ಓಂಕಾರ, ಸುಪ್ರ ಭಾತ ಮತ್ತು ನಗರ ಸಂಕೀರ್ತನೆ ಇರುತ್ತದೆ. 7 ಗಂಟೆಗೆ ಶ್ರೀ ಸಾಯೀಶ್ವರ ಲಿಂಗಕ್ಕೆ ರುದ್ರಾಭಿ ಷೇಕ ನಡೆಯಲಿದೆ. ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಶ್ರೀ ಸಾಯೀಶ್ವರ ಲಿಂಗಕ್ಕೆ ರುದ್ರಾಭಿಷೇಕ ಏಕಾದಶ ರುದ್ರಾಭಿಷೇಕ ನಡೆ ಯಲಿದೆ. ರಾತ್ರಿ 7 ಗಂಟೆಯಿಂದ 8 ಗಂಟೆಯ ವರೆಗೆ ಸಾರ್ವಜನಿಕರು ರುದ್ರಾಭಿ ಷೇಕ ನಡೆಸಲು ಅವಕಾಶವಿರುತ್ತದೆ. ಇಂದು ರಾತ್ರಿ 8 ಗಂಟೆಯಿಂದ ಶನಿವಾರ ಬೆಳಿಗ್ಗೆ 6 ಗಂಟೆಯ ವರೆಗೆ ಭಜನೆಯ ಮೂಲಕ ಜಾಗರಣೆ ನಡೆಯಲಿದೆ ಎಂದು ಸಂಚಾಲಕರಾದ ಪಾಂಡುರಂಗ ರಾವ್ ತಿಳಿಸಿದ್ದಾರೆ.
February 28, 2025