ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಮುಖ್ಯಸ್ಥರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಶಿವದೇವಿ ಅವರು ತಿಳಿಸಿದ್ದಾರೆ. ಶಿವರಾತ್ರಿ ಪ್ರಯುಕ್ತ ಸಂಕರ್ಷಣ ನೃತ್ಯಾಲಯದ ಗುರು ಹಾಗೂ ಶಿಷ್ಯ ವೃಂದದಿಂದ ಶಿವ ತಾಂಡವ ಮತ್ತು ಅರ್ಧನಾರೀಶ್ವರ ನೃತ್ಯ, ನಂತರ ದ್ವಾದಶ ಜ್ಯೋತಿರ್ಲಿಂಗಗಳ ಶೋಭಾಯಾತ್ರೆ ಹಾಗೂ ವಿಶೇಷವಾಗಿ ಅಮರನಾಥ ದರ್ಶನ ಏರ್ಪಡಿಸಲಾಗಿದೆ.
February 28, 2025