ಹರಪನಹಳ್ಳಿ, ಮಾ. 6 – ಜೆಸಿಐ ತಾಲ್ಲೂಕು ಅಧ್ಯಕ್ಷರಾಗಿ ಡಾ. ಪ್ರಿಯಾಂಕ ಅಧಿಕಾರ್ ಅವರು ಅಧಿಕಾರ ಸ್ವೀಕರಿಸಿದರು.
ತಾಲ್ಲೂಕಿನ ಕಾಯಕದ ಹಳ್ಳಿ ಗ್ರಾಮದ ಸಮೀಪದಲ್ಲಿ ರುವ ಪರಿವರ್ತನಾ ಶಾಲೆಯಲ್ಲಿ ಆಯೋಜಿಸಿದ್ದ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಡಾ.ಪ್ರಿಯಾಂಕ ಅಧಿಕಾರ್ ಅವರು ತಮ್ಮ ಅಧಿಕಾರವನ್ನು ಸ್ವೀಕರಿಸಿದರು.
ಈ ವೇಳೆ ಪರಶುರಾಮ ಚಲವಾದಿ, ವಕೀಲ ಮತ್ತಿಹಳ್ಳಿ ಅಜ್ಜಣ್ಣ, ರವಿಶಂಕರ್, ಪ್ರಭಾಕರ್ ಕನ್ನಿಹಳ್ಳಿ, ಹೇಮಣ್ಣ ಮೋರಗೇರಿ, ಅಂಬಣ್ಣ, ಶಿವಕುಮಾರ್, ರವೀಂದ್ರ ಅಧಿಕಾರ್, ಪ್ರಸನ್ನಕುಮಾರ್ ಜೈನ್, ಮಲ್ಲಿಕಾರ್ಜುನ, ಟಿ.ಎಂ. ವೀರೇಶ್, ಇರ್ಷಾದ್ ಭಾಷಾ, ಶಿವಕುಮಾರ್ ನಾಯ್ಕ್, ಡಾ. ಎಂ.ಬಿ.ಅಧಿಕಾರ್, ಡಾ. ಹರ್ಷ ಜಿ.ವಿ, ಡಾ. ಪ್ರಶಾಂತ್ ಬಂದಣ್ಣನವರ್, ಡಾ. ಸೀಮಾ ಅಧಿಕಾರ್, ಡಾ. ರಘು ಅಧಿಕಾರ್ ಸೇರಿದಂತೆ ಪರಿವರ್ತನಾ ಶಾಲೆಯ ಶಿಕ್ಷಕರು ಸೇರಿದಂತೆ ಜೆಸಿಐ ಸದಸ್ಯರು ಉಪಸ್ಥಿತರಿದ್ದರು.