ದಾವಣಗೆರೆ, ಮಾ. 6 – ನಗರದ ಲೇಬರ್ ಕಾಲೋನಿಯ ಶ್ರೀ ಕರಿಬಸವೇಶ್ವರ ಸ್ವಾಮಿ ದೇವ ಸ್ಥಾನ ಸಮಿತಿ ವತಿಯಿಂದ ಇದೇ 10 ರಂದು ಸಂಜೆ 7 ಕ್ಕೆ ಜಾಗರಣೆ ಪ್ರಯುಕ್ತ ಭಜನೆ ಏರ್ಪಡಿಸಲಾಗಿದೆ. ಇದೇ ದಿನಾಂಕ 11 ರ ಸೋಮವಾರ ಬೆಳಿಗ್ಗೆ 6 ಗಂಟೆಗೆ ಸ್ವಾಮಿಗೆ ಮಹಾರುದ್ರಾಭಿಷೇಕ ನಂತರ 9ಕ್ಕೆ ಸ್ವಾಮಿಯ ಮೆರವಣಿಗೆ, ಮಧ್ಯಾಹ್ನ 12.30ಕ್ಕೆ ಮಹಾಪ್ರಸಾದ ನಡೆಯಲಿದೆ. ದಿನಾಂಕ 12ರ ಮಂಗಳವಾರ ಬೆಳಿಗ್ಗೆ ಪೂಜೆಯ ನಂತರ ಪಳಾರ ಹಾಕಿಸುವುದು. ದಿನಾಂಕ 14ರ ಗುರುವಾರ ಸಂಜೆ 6.30ಕ್ಕೆ ಪಳಾರ ಹಂಚಲಾಗುವುದು ಎಂದು ದೇವಸ್ಥಾನದ ವ್ಯವಸ್ಥಾಪಕ ಪಿ.ಎನ್. ಲೋಕೇಶಪ್ಪ ತಿಳಿಸಿದ್ದಾರೆ.
ಲೇಬರ್ ಕಾಲೋನಿ ಶ್ರೀ ಕರಿಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶಿವರಾತ್ರಿ ಜಾಗರಣೆ
