ಕುಮಾರ ಪಟ್ಟಣ್ಣಂನ ಗ್ರಾಸಿಂ ಕಾರ್ಖಾನೆಯ ವತಿಯಿಂದ ಸಾರ್ವಜನಿಕರಿಗೆ ಅನಿಲ ಸೋರಿಕೆಯ ಬಗ್ಗೆ ಅಣಕು ಪ್ರದರ್ಶನವನ್ನು ಇಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಖಾನೆಯ ಕಾರ್ಯಕ್ರಮ ಸಂಯೋಜಕ ರಮೇಶ್ ತಿಳಿಸಿದ್ದಾರೆ. ಅಣುಕು ಪ್ರದರ್ಶನವನ್ನು ಹಾವೇರಿ ಜಿಲ್ಲೆಯ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಶ್ ಕುಮಾರ್ ಚಾಲನೆ ನೀಡಲಿದ್ದಾರೆ. ಗ್ರಾಸಿಂ ಕಾರ್ಖಾನೆ ಮುಖ್ಯಸ್ಥ ಅಜಯ ಗುಪ್ತ ಮತ್ತು ಇತರರು ಉಪಸ್ಥಿತರಿರುವರು.
February 28, 2025