ದಾವಣಗೆೆರೆ, ಮಾ. 6- ಇಲ್ಲಿನ ವಿನೋಬನಗರ ಮೊದಲನೇ ಮುಖ್ಯರಸ್ತೆ, ಎರಡನೇ ಅಡ್ಡರಸ್ತೆಯಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 8 ರಂದು ಶುಕ್ರವಾರ ಬೆಳಗಿನ ಜಾವ 4.30 ರಿಂದ ಶಂಭುಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಜರುಗಲಿವೆ. ಸಂಜೆ 4.30 ರಿಂದ ತಡರಾತ್ರಿಯವರೆಗೆ ಶ್ರೀ ಸ್ವಾಮಿಯ ದಿವ್ಯ ದರ್ಶನವಿರುತ್ತದೆ.
January 10, 2025