ಇಂದು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದಿಂದ ವಿವಿಧ ಕಾರ್ಯಕ್ರಮ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿ ಯಿಂದ ಇಂದು ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9.30 ರಿಂದ 10 ರವರೆಗೆ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ `ನಾರಿ ವಂದನಾ ಮ್ಯಾರಾಥಾನ್’ (ಪಾದಯಾತ್ರೆ), `ಮಾತೃ ಹೃದಯ ಮೋದಿ ವಿಜಯ’
ಶೀರ್ಷಿಕೆ ಅಡಿಯಲ್ಲಿ ಜಿಲ್ಲೆಯ ಎಲ್ಲಾ ಸಮಾಜಗಳ, ವಿವಿಧ ಸಂಘ-ಸಂಸ್ಥೆಗಳ ಮಹಿಳೆಯರು ಒಂದಾಗಿ ಬಿಜೆಪಿ ಕಚೇರಿಯಿಂದ ಜಯದೇವ ಸರ್ಕಲ್ ವರೆಗೂ `ನಮ್ಮ ನಡಿಗೆ ಮೋದಿ ಕಡೆಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10.30 ಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನೇರ ಪ್ರಸಾರದ ವೀಕ್ಷಣೆಯ ಅವಕಾಶ ಮಾಡಲಾಗಿದೆ.

ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡ ಮಂಡಲಗಳು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ, ಉಳಿದಂತೆ ಹರಿಹರ, ಜಗಳೂರು, ಚನ್ನಗಿರಿ ಬಿಜೆಪಿ ಕಚೇರಿಗಳಲ್ಲಿ ಆಯೋಜಿಸಲಾಗಿದೆ. 

ನಂತರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಹಿಳಾ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ ವಾಲಿ ತಿಳಿಸಿದ್ದಾರೆ. 

error: Content is protected !!