ಮೌಲಾನಾ ಫೌಂಡೇಷನ್ ಮುಚ್ಚುವ ಕ್ರಮ ಖಂಡನೀಯ

ದಾವಣಗೆರೆ, ಮಾ. 5-  ಯಾವುದೇ ಸೂಕ್ತ ಕಾರಣ ನೀಡದೆ ಮೌಲಾನಾ ಆಜಾದ್ ಎಜುಕೇಶನ್   ಫೌಂಡೇಶನ್ ಮುಚ್ಚಲು ಆದೇಶವನ್ನು ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ ಅಧೀನ ಕಾರ್ಯದರ್ಶಿ ಧೀರಜ್ ಕುಮಾರ್ ಫೆಬ್ರವರಿ 7 ರಂದು ಆದೇಶ ಹೊರಡಿಸಿದ್ದು ಇದಕ್ಕೆ ಸೂಕ್ತ ಕಾರಣ ಒದಗಿಸಿಲ್ಲ ಎಂದು ಕರ್ನಾಟಕ ಸೋಷಿಯಲ್ ಸರ್ವೀಸ್ ಸಂಘಟನೆ ದೂರಿದೆ.  

2021-22 ರಲ್ಲಿ ಮೌಲಾನಾ ಆಜಾದ್ ಫೆಲೋಶಿಪ್ ಬಂದ್ ಮಾಡಿರುವ ಕೇಂದ್ರ ಸರ್ಕಾರ `ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಘೋಷಣೆ ಕೇವಲ ಚುನಾವಣಾ ಗಿಮಿಕ್‍ಕ್ಕಿಂತ ಹೆಚ್ಚೇನಿನೂ ಅಲ್ಲ. ಹೊಸ ಹೊಸ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ದೇಶವನ್ನು ಅನಕ್ಷರತೆಯಿಂದ ಶೈಕ್ಷಣಿಕ ಅಭಿವೃದ್ಧಿ ಕಡೆ ಕೊಂಡೊಯ್ಯಬೇಕಾದ ಸರ್ಕಾರಗಳು ಪಕ್ಷಪಾತ ಹಾಗೂ ದ್ವೇಷ ರಾಜಕಾರಣ ಮಾಡುತ್ತಾ ದೇಶವನ್ನು ದಿವಾಳಿಯತ್ತ ಸಾಗಿಸುತ್ತಿವೆ ಎಂದು   ಸಂಘಟನೆ  ಕೇಂದ್ರದ ಕ್ರಮವನ್ನು ಖಂಡಿಸಿದೆ.

error: Content is protected !!