ಜಗಳೂರು : ಉತ್ತಮ ಇಳುವರಿಗೆ ಗುಣಮಟ್ಟದ ಬೀಜ ಬಳಸಲು ಸಲಹೆ

ಜಗಳೂರು ಮಾ. 5- ಈರುಳ್ಳಿ ಬೆಳೆಗಾರಿಕೆಯಲ್ಲಿ ಗುಣಮಟ್ಟದ ಬೀಜ ಬಳಸಿದಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಸಲಹೆ ನೀಡಿದರು.

ತಾಲ್ಲೂಕಿನ ನಿಬಗೂರು ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರವು ಇತ್ತೀಚೆಗೆ ಹಮ್ಮಿಕೊಂಡಿದ್ದ `ಈರುಳ್ಳಿ ಬೆಳೆಯ ಕ್ಷೇತ್ರ ಪ್ರಯೋಗದ ಕ್ಷೇತ್ರೋತ್ಸವ’ದಲ್ಲಿ ಮಾತನಾಡಿದರು.

ಭೀಮಾ ರೆಡ್‌, ಭೀಮಾ ಶಕ್ತಿ, ಎಎಫ್‌ಎಲ್‌ಆರ್‌ ತಳಿಗಳನ್ನು ರೈತರಿಗೆ ಪರಿಚಯಿಸಲಾಗಿದ್ದು, ಇದನ್ನು ಬಳಸಿದ ರೈತರ ತಾಕುಗಳಲ್ಲಿ ಉತ್ತಮ ಬೆಳೆ ಬಂದಿದೆ  ಎಂದು ತಿಳಿಸಿದರು. ಸಮಗ್ರ ಪೋಷಕಾಂಶಗಳ ಜತೆಗೆ ರೋಗ ಹಾಗೂ ಕೀಟಗಳ ನಿರ್ವಹಣೆ ಮಾಡುವುದರಿಂದ ಉತ್ತಮ ಗಡ್ಡೆ ಕಟ್ಟುತ್ತದೆ. ಇದರಿಂದ ರೈತರು ಗಡ್ಡೆಗಳ ವರ್ಗೀಕರಣ ಮಾಡಿ ಮಾರಾಟ ಮಾಡಿದಾಗ ಉತ್ತಮ ಬೆಲೆ ಪಡೆಯಬಹುದು ಎಂದರು. ಮೂರು ತಳಿಗಳ ಪೈಕಿ ಭೀಮಾ ರೆಡ್‌ ತಳಿಯು ಉತ್ತಮ ಗಡ್ಡೆ ಕಟ್ಟಿದ್ದು, ಬೇಸಿಗೆ ಯಲ್ಲಿ ಬೆಳೆಯಲು ಯೋಗ್ಯವಾಗಿದೆ ಎಂದು ಹೇಳಿದರು. ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್‌ ಮಾತನಾಡಿದರು.

ರೈತ ಉತ್ಪಾದಕ ಕಂಪನಿ ಉಪಾಧ್ಯಕ್ಷ ಸೋಮನ ಗೌಡ, ನಿರ್ದೇಶಕ ರೇವಣ್ಣ, ಕೃಷ್ಣಮೂರ್ತಿ, ಬಸವನ ಗೌಡ್ರು, ಸಿಬ್ಬಂದಿಗಳಾದ ಆದರ್ಶ್, ಸುರೇಶ್, ರೈತರಾದ ನಾಗರಾಜ್, ಗುರುಸಿದ್ದನಗೌಡ ಇತರರು ಇದ್ದರು.

error: Content is protected !!